ಕಾಣದಂತೆ ಮಾಯವಾದನು ಚಿತ್ರತಂಡ ಒಂದು ವಿಶೇಷ ಸ್ಪರ್ಧೆ ಆಯೋಜಿಸಿತ್ತು. ಕಾಣದಂತೆ ಮಾಯವಾದನು ಚಿತ್ರಕ್ಕೆ ಒಂದು ಆಕರ್ಷಕ ಟ್ಯಾಗ್‍ಲೈನ್ ನೀಡಿ, 50 ಸಾವಿರ ರೂ. ಬಹುಮಾನ ಗೆಲ್ಲಿ ಎಂದು ಸ್ಪರ್ಧೆಯೊಡ್ಡಿತ್ತು. ಈಗ ಟ್ಯಾಗ್‍ಲೈನ್ ಸಿಕ್ಕಿದೆ. `ಗೋರಿ ಆದ್ಮೇಲ್ ಹುಟ್ಟಿದ್ ಕಥೆ' ಅನ್ನೋದು ಟ್ಯಾಗ್‍ಲೈನ್. ನರೇಂದ್ರ ಎಸ್.ಸಂಗೊಳ್ಳಿ ಎಂಬುವವರು ನೀಡಿರುವ ಟ್ಯಾಗ್‍ಲೈನ್ ಬಹುಮಾನ ಗೆದ್ದಿದೆ.
ಜಯಮ್ಮನ ಮಗ ನಿರ್ದೇಶಕ ವಿಕಾಸ್, ಈ ಚಿತ್ರದ ಮೂಲಕ ನಾಯಕನಟರಾಗಿದ್ದಾರೆ. ಸಿಂಧು ಲೋಕನಾಥ್ ನಾಯಕಿ. ಚಂದ್ರಶೇಖರ್ ನಾಯ್ಡು, ಸೋಮ್‍ಸಿಂಗ್, ಪುಷ್ಪ ಸೋಮ್‍ಸಿಂಗ್ ನಿರ್ಮಾಪಕರು.