` ಅ ದೃಶ್ಯದಲ್ಲಿ ನಾಯಕಿ ಜಾಗದಲ್ಲಿ ನಾನಿರಬೇಕಿತ್ತು - ಪ್ರಿಯಾ ಸುದೀಪ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
priya sudeep wished she was in that particular scene instaed of heroine
Sudeep, Priya Sudeep

ಪೈಲ್ವಾನ್ ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ. ಇದೊಂದು ಸ್ಫೂರ್ತಿದಾಯಕ ಚಿತ್ರ ಎಂದು ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದಾರೆ. ಸುದೀಪ್-ಆಕಾಂಕ್ಷಾ ಜೋಡಿಯೂ ಇಷ್ಟವಾಗಿದೆ. ಆದರೆ ಇಡೀ ಚಿತ್ರದಲ್ಲಿ ಸುದೀಪ್ ಅವರ ಪತ್ನಿ ಪ್ರಿಯಾಗೆ ಇಷ್ಟವಾದ ದೃಶ್ಯ ಯಾವುದು ಗೊತ್ತೇ..?

`ಪೈಲ್ವಾನ್ ಚಿತ್ರದಲ್ಲಿ ಮದುವೆ ಮನೆಗೆ ಸುದೀಪ್ ಎಂಟ್ರಿ ಕೊಡುವ ದೃಶ್ಯ ನನ್ನ ಫೇವರಿಟ್. ಏನ್ ಸ್ಟೈಲಿಷ್ ಆಗಿ ಎಂಟ್ರಿ ಕೊಡ್ತಾರೆ ಸುದೀಪ್. ನನಗಂತೂ ಆ ದೃಶ್ಯ ನೋಡುವಾಗ ನಾಯಕಿ ಅಂದರೆ ವಧು ಇದ್ದ ಜಾಗದಲ್ಲಿ ನಾನಿರಬೇಕಿತ್ತು ಎನ್ನಿಸಿಬಿಟ್ಟಿ' ಎಂದು ಹೇಳಿಕೊಂಡಿದ್ದಾರೆ.

ಅಂದಹಾಗೆ ಸುದೀಪ್ ಮತ್ತು ಪ್ರಿಯಾ ಅವರದ್ದು ಲವ್ ಮ್ಯಾರೇಜ್. ಸಹಜವಾಗಿಯೇ ಪ್ರಿಯಾಗೆ ಅವರ ಪ್ರೀತಿಯ ದಿನಗಳು, ಮದುವೆಯ ದಿನಗಳು ನೆನಪಾಗಿದ್ದಾರೆ ಅಚ್ಚರಿಯಿಲ್ಲ. ಎಲ್ಲ ಓಕೆ.. ಚಿತ್ರದಲ್ಲಿ ನಿಮಗಿಷ್ಟವಾದ ಸೀನ್ ಯಾವುದು..? ಪ್ರಿಯಾ ಕೇಳುತ್ತಿದ್ದಾರೆ. ಹೇಳ್ತೀರಾ..

Ayushmanbhava Movie Gallery

Ellidhe Illitanaka Movie Gallery