ಕಿಚ್ಚ ಸುದೀಪ್ ಅವರ ಪೈಲ್ವಾನ್ ಅಬ್ಬರಿಸಿ ಬೊಬ್ಬಿರಿಯುತ್ತಿದ್ದರೆ, ಕೆಲವು ಕಿಡಿಗೇಡಿಗಳು ಚಿತ್ರದ ಬಗ್ಗೆ ಅಪಪ್ರಚಾರಕ್ಕೆ ಕೈ ಹಾಕಿದ್ದಾರೆ. ಕನ್ನಡದಲ್ಲಷ್ಟೆ ಅಲ್ಲ, ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲೂ ಪ್ರೇಕ್ಷಕ ಮಹಾಪ್ರಭು ಗೆದ್ದಾ ನೋಡೋ ಪೈಲ್ವಾನ್ ಎನ್ನುತ್ತಿದ್ದಾರೆ. ಆದರೆ, ವಿಘ್ನ ಸಂತೋಷಿಗಳು ಎಲ್ಲೆಲ್ಲೂ ಇರುತ್ತಾರೆ ಅಲ್ವೇ. ಅಂತಹವರು ಸುದೀಪ್ ಅವರಂತಹ ಸ್ಟಾರ್ ನಟರನ್ನೂ ಬಿಟ್ಟಿಲ್ಲ. ಇದಕ್ಕೆಲ್ಲ ನೀವು ಉತ್ತರ ಕೊಡಿ ಎಂದು ಆಗ್ರಹಿಸಿದ ಅಭಿಮಾನಿಗಳಿಗೆ ಸುದೀಪ್ ಹೇಳಿರುವುದು ಇಷ್ಟು.
`ಚಿತ್ರದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವವರನ್ನು ಆಡಿಕೊಳ್ಳಲು ಬಿಟ್ಟು ಬಿಡಿ. ಅವರ ಸಂತೋಷ ಅವರಿಗೆ. ಇಷ್ಟಕ್ಕೂ ಅವರು ಯಾಕೆ ನಮ್ಮ ಬಗ್ಗೆ ಅಪಪ್ರಚಾರ ಮಾಡ್ತಾರೆ ಹೇಳಿ.. ನಾವು ಏನನ್ನಾದರೂ ಅದ್ಭುತವಾದದ್ದನ್ನು ಮಾಡಿ ತೋರಿಸಿದಾಗ. ಅವರನ್ನೆಲ್ಲ ಸೈಡಿಗಿಡಿ. ಚಿತ್ರವನ್ನು ಎಂಜಾಯ್ ಮಾಡಿ'
ಹಲವು ಕಡೆ ಚಿತ್ರಮಂದಿರವೇ ಕಾಣದಷ್ಟು ಬ್ಯಾನರುಗಳು, ಅಭಿಮಾನಿಗಳ ಸಂದೇಶಗಳು ತುಂಬಿಕೊಂಡಿವೆ. ಮತ್ತೊಂದೆಡೆ ಪೈರಸಿ ಕ್ರಿಮಿನಲ್ಸ್ ಕಾಟವೂ ಇದೆ. ಇಷ್ಟೆಲ್ಲ ಇದ್ದರೂ ಚಿತ್ರಮಂದಿರಗಳು ತುಂಬಿ ತುಳುಕುತ್ತಿರುವುದೇ ಪೈಲ್ವಾನ್ ಮಾಡಿರುವ ಅತಿ ದೊಡ್ಡ ಸಾಧನೆ.