ಐ ಲವ್ ಯು ಚಿತ್ರದ ಭರ್ಜರಿ ಸಕ್ಸಸ್ ನಂತರ ಆರ್.ಚಂದ್ರು ಮತ್ತು ಉಪೇಂದ್ರ ಮತ್ತೊಮ್ಮೆ ಒಂದಾಗಿದ್ದಾರೆ. ಹೊಸ ಚಿತ್ರದ ಟೈಟಲ್ ಕಬ್ಜಾ. ಅನುಮಾನವೇ ಇಲ್ಲ, ಇದೊಂದು ರೌಡಿಸಂ ಸ್ಟೋರಿ. ಚಂದ್ರು ಅವರ ಬ್ಯಾನರಿನಲ್ಲೇ ಕಬ್ಜಾ ನಿರ್ಮಾಣವಾಗಲಿದೆ.
`ಇದು ರೌಡಿಸಂ ಚಿತ್ರವಾದರೂ ಎಲ್ಲ ಭಾಷೆಯ ಪ್ರೇಕ್ಷಕರಿಗೂ ಕನೆಕ್ಟ್ ಆಗುವ ಸ್ಟೋರಿ ಇದೆ. ಉಪೇಂದ್ರ ಬೇರೆಯದೇ ರೀತಿಯಲ್ಲಿ ಮಿಂಚಲಿದ್ದಾರೆ' ಎಂದು ಭರವಸೆ ಕೊಟ್ಟಿದ್ದಾರೆ ಚಂದ್ರು.
ವಿಶೇಷವೆಂದರೆ ಐ ಲವ್ ಯು ಚಿತ್ರವನ್ನು ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಮಾಡಿದ್ದ ಚಂದ್ರು, ಕಬ್ಜಾ ಚಿತ್ರವನ್ನು ಕನ್ನಡ, ತೆಲುಗು, ತಮಿಳು, ಮಲಯಾಳಂ. ಹಿಂದಿ, ಮರಾಠಿ ಮತ್ತು ಬೆಂಗಾಳಿ ಭಾಷೆಗಳಲ್ಲಿ ಅಂದರೆ ಒಟ್ಟು 7 ಭಾಷೆಗಳಲ್ಲಿ ರಿಲೀಸ್ ಮಾಡಲಿದ್ದಾರೆ.