ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಚಿತ್ರದ ಮೊದಲ ಟೀಸರ್ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೇನು ಕೆಲವೇ ದಿನ. ಟೀಸರ್ ಹೊರಬೀಳುವುದು ಪಕ್ಕಾ. ಏಕೆಂದರೆ ಪುನೀತ್ ಟೀಸರ್‍ನ ಡಬ್ಬಿಂಗ್ ಮುಗಿಸಿದ್ದಾರೆ.
ಸಂತೋಷ್ ಆನಂದ್ ರಾಮ್, ಹೊಂಬಾಳೆ ಬ್ಯಾನರ್ ಜೊತೆ ರಾಜಕುಮಾರದ ನಂತರ ಜೊತೆಯಾಗಿದ್ದಾರೆ ಪುನೀತ್. ನಿರೀಕ್ಷೆ ಮೌಂಟ್ ಎವರೆಸ್ಟ್ ತಲುಪೋಕೆ ಇಷ್ಟೇ ಸಾಕು. ಅಂಥದ್ದರಲ್ಲಿ ಚಿತ್ರದಲ್ಲಿ ಪ್ರಕಾಶ್ ರೈ, ಸುಧಾರಾಣಿ, ಸೋನುಗೌಡ, ಗುರುದತ್, ಅಚ್ಯುತ್ ಕುಮಾರ್, ರಾಧಿಕಾ ಶರತ್ ಕುಮಾರ್, ರವಿಶಂಕರ್ ಗೌಡ, ವಸಿಷ್ಠ ಸಿಂಹ, ರಂಗಾಯಣ ರಘು, ಕುರಿ ಪ್ರತಾಪ್, ಆರು ಗೌಡ, ತ್ರಿವೇಣಿ, ಸಾಯಿಕುಮಾರ್.. ಹೀಗೆ ಪ್ರತಿಭಾನ್ವಿತರ ದಂಡೇ ಇದೆ. ಸಯೇಷಾ ಸೈಗಲ್ ನಾಯಕಿ. ವೇಯ್ಟ್ ಮಾಡಿ. ಹಬ್ಬಕ್ಕೆ ರೆಡಿಯಾಗಿ.