` ನವೆಂಬರ್‍ಗೆ ಆಯುಷ್ಮಾನ್ ಭವ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ayushman bhav may release in november
AyushmanBhav

ಶಿವರಾಜ್ ಕುಮಾರ್ ಇದೇ ಮೊದಲ ಬಾರಿಗೆ ದ್ವಾರಕೀಶ್ ಬ್ಯಾನರಿನಲ್ಲಿ ನಟಿಸಿರುವ ಚಿತ್ರ ಆಯುಷ್ಮಾನ್ ಭವ. ಆನಂದ್ ಎಂದು ಮೊದಲು ಟೈಟಲ್ ಇಟ್ಟುಕೊಂಡಿದ್ದ ಚಿತ್ರಕ್ಕೆ ಆಯುಷ್ಮಾನ್ ಭವ ಎಂದು ಟೈಟಲ್ ಬದಲಿಸಲಾಯ್ತು. ಶಿವಲಿಂಗ ಚಿತ್ರದ ನಂತರ ಶಿವಣ್ಣ ಮತ್ತು ನಿರ್ದೇಶಕ ಪಿ.ವಾಸು ಮತ್ತೊಮ್ಮೆ ಜೊತೆಯಾಗಿರುವ ಚಿತ್ರವಿದು.

ಇದೇ ಮೊದಲ ಬಾರಿಗೆ ರಚಿತಾ ರಾಮ್, ಶಿವರಾಜ್‍ಕುಮಾರ್‍ಗೆ ನಾಯಕಿಯಾಗಿದ್ದಾರೆ. ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿದ್ದಾರೆ.

ಚಿತ್ರವನ್ನು ನವೆಂಬರ್‍ನಲ್ಲಿ ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ. ಹಲವು ವಿಶೇಷಗಳ ಕಾರಣಕ್ಕೇ ಗಮನ ಸೆಳೆದಿರುವ ಆಯುಷ್ಮಾನ್ ಭವ ರಿಲೀಸ್‍ಗೆ ಅಭಿಮಾನಿಗಳು ಕಾಯುತ್ತಿದ್ದಾರೆ.

Ayushmanbhava Movie Gallery

Ellidhe Illitanaka Movie Gallery