` ರಾಗಿಣಿಗಾಗಿ ಅಮೆರಿಕಕ್ಕೆ ಸೇಲ್ ಆದ ಅಧ್ಯಕ್ಷ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
adhyaksha in america song
Amma Na Sale Adhe Song

ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಹಾಡೊಂದು ಹೊರಬಿದ್ದಿದೆ. ಅಮ್ಮ ನಾ ಸೇಲಾದೆ.. ಅಮೆರಿಕ ಪಾಲಾದೆ ಅನ್ನೋ.. ಹಾಡು. ಇದು ಕಾಶೀನಾಥ್ ಅವರ ಚಿತ್ರದ ಹಿಟ್ ಸಾಂಗ್‍ನ ತುಣುಕು. ಆದರೆ, ಅಧ್ಯಕ್ಷ ಇನ್ ಅಮೆರಿಕದಲ್ಲಿ ಅದೊಂದು ಸಾಲನ್ನಷ್ಟೇ ಎತ್ತಿಕೊಂಡು ಹೊಸ ಹಾಡನ್ನೇ ಸೃಷ್ಟಿಸಲಾಗಿದೆ. ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಹೊಸದೇ ಹಾಡು ಸೃಷ್ಟಿಯಾಗಿದ್ದು, ಹಾಡು ಶಿಳ್ಳೆ ಹೊಡೆಯುವಂತಿದೆ.

ರಾಗಿಣಿಯ ಚೆಲುವಿಗೆ ಮಾರು ಹೋಗಿ ಅವರ ಹಿಂದೆ ಬೀಳೋ ತುಂಟನಾಗಿ ಹುಚ್ಚೆದ್ದು ಕುಣಿದಿದ್ದಾರೆ ಶರಣ್. ಶರಣ್ ಚಿತ್ರಕ್ಕೆ ವಿ. ಹರಿಕೃಷ್ಣ ಇದೇ ಮೊದಲ ಬಾರಿಗೆ ಸಂಗೀತ ಕೊಟ್ಟಿದ್ದಾರೆ. ಯೋಗಾನಂದ್ ಮದ್ದಾನ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರ ಇದು. ವಿಶ್ವಪ್ರಸಾದ್ ಚಿತ್ರದ ನಿರ್ಮಾಪಕ. ಬಹುತೇಕ ಅಮೆರಿಕದಲ್ಲಿಯೇ ಚಿತ್ರೀಕರಣವಾಗಿರುವ ಸಿನಿಮಾದ ಹಾಡು, ಟ್ರೆಂಡ್ ಆಗಿದೆ.

Matthe Udbhava Trailer Launch Gallery

Maya Bazaar Pressmeet Gallery