` ವಿಲನ್ ಪಾತ್ರಕ್ಕೆ ಡಿಮ್ಯಾಂಡ್ ಇಟ್ಟು ನಿರ್ಮಾಪಕರಾಗಿದ್ದ ಬಿ.ಸಿ.ಪಾಟೀಲ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
what was bc patils condition to suni kumar desai
Sunil Kumar Desai, BC Patil

ನಿಷ್ಕರ್ಷ ಚಿತ್ರ 90ರ ದಶಕದ ಸೂಪರ್ ಡ್ಯೂಪರ್ ಹಿಟ್ ಸಿನಿಮಾ. ರೆಗ್ಯುಲರ್ ಲೆಕ್ಕಾಚಾರಗಳನ್ನೆಲ್ಲ ಉಲ್ಟಾ ಮಾಡಿ, ಸಿದ್ಧಸೂತ್ರಗಳನ್ನೆಲ್ಲ ಆಚೆಯಿಟ್ಟು ನಿರ್ಮಿಸಿದ್ದ ಸಿನಿಮಾ. ಎಷ್ಟರಮಟ್ಟಿಗೆಂದರೆ ವಿಷ್ಣುವರ್ಧನ್, ಅನಂತ್ ನಾಗ್ ಇದ್ದರೂ.. ಈ ಚಿತ್ರ ಕನ್ನಡಕ್ಕಲ್ಲ ಎಂದು ವಿತರಕರು ಚಿತ್ರವನ್ನು ತೆಗೆದುಕೊಳ್ಳಲು ಹೆದರಿದ್ದರು. ಇಷ್ಟೆಲ್ಲ ಆಗಿ ಸಿನಿಮಾವನ್ನು ರಿಲೀಸ್ ಮಾಡಿ ಗೆದ್ದಿದ್ದರು ಬಿ.ಸಿ.ಪಾಟೀಲ್.

ವಿಶೇಷವೇನು ಗೊತ್ತೇ.. ಚಿತ್ರದ ನಿರ್ಮಾಪಕ ಬಿ.ಸಿ.ಪಾಟೀಲ್ ನಿರ್ದೇಶಕ ದೇಸಾಯಿ ಅವರ ಎದುರು ಒಂದು ಕಂಡಿಷನ್ ಇಟ್ಟಿದ್ದರಂತೆ. ನನ್ನನ್ನು ವಿಲನ್ ಮಾಡುವುದಾದರೆ ನಾನು ಸಿನಿಮಾ ನಿರ್ಮಾಪಕನಾಗುತ್ತೇನೆ ಎಂದಿದ್ದರಂತೆ. ಅರೆ.. ದುಡ್ಡು ಹಾಕುವ, ನೋಡಲು ಚೆನ್ನಾಗಿಯೂ ಇರುವ ಬಿ.ಸಿ.ಪಾಟೀಲ್, ಹೀರೋ ಪಾತ್ರಕ್ಕೆ ಡಿಮ್ಯಾಂಡ್ ಇಡಬಹುದಾಗಿತ್ತಲ್ಲ ಎನ್ನುತ್ತೀರಾ..? ಅಲ್ಲಿಯೇ ಇರೋದು ಸ್ವಾರಸ್ಯ.

``ದೇಸಾಯಿ ನಿರ್ದೇಶನದ ಉತ್ಕರ್ಷದಲ್ಲಿ ಅಂಬರೀಷ್ ಹೀರೋ. ಆದರೆ ಮಿಂಚಿದ್ದು ದೇವರಾಜ್. ತರ್ಕ ಚಿತ್ರದಲ್ಲಿ ಶಂಕರ್ ನಾಗ್ ಹೀರೋ. ಆದರೆ ಮಿಂಚಿದ್ದು ದೇವರಾಜ್. ಹೀಗಾಗಿ ದೇಸಾಯಿ ಚಿತ್ರದಲ್ಲಿ ವಿಲನ್ ಆದರೆ ಮಿಂಚಬಹುದು ಎಂದುಕೊಂಡು ವಿಲನ್ ಪಾತ್ರಕ್ಕೆ ಷರತ್ತು ಹಾಕಿದ್ದೆ' ಎನ್ನುತ್ತಾರೆ ಬಿ.ಸಿ.ಪಾಟೀಲ್.

ವಿಷ್ಣು, ಅನಂತ್ ಅವರಂತಹ ಸೀನಿಯರ್ ನಟರ ಎದುರು ಹೊಸಬನನ್ನು ವಿಲನ್ ಮಾಡುವುದು ಹೇಗೆ ಎಂಬ ಹಿಂಜರಿಕೆಯಲ್ಲೇ ಪಾತ್ರ ಕೊಟ್ಟಿದ್ದರಂತೆ ದೇಸಾಯಿ. ಆದರೆ ಸಿನಿಮಾ ನೋಡುವಾಗ ಜನರು ಬಿ.ಸಿ.ಪಾಟೀಲರಿಗೆ ಬೈಯ್ಯುವುದನ್ನು ನೋಡಿ ಗೆದ್ದುಬಿಟ್ರಿ ನೀವು ಎಂದು ಬೆನ್ನು ತಟ್ಟಿದ್ದರಂತೆ ದೇಸಾಯಿ.

Babru Teaser Launch Gallery

Odeya Audio Launch Gallery