ಯಾವಾಗ್ ಬರ್ತಾನ್ ಪೈಲ್ವಾನ್ ಎಂದು ವರ್ಷದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ.. ಬಂದ ನೋಡೋ ಪೈಲ್ವಾನ್ ಎಂದು ಬಂದೇಬಿಟ್ರು ಕಿಚ್ಚ ಸುದೀಪ್. ಈಗ ಅದೇ ಅಭಿಮಾನಿಗಳು ಗೆದ್ದ ನೋಡೋ ಪೈಲ್ವಾನ್ ಎನ್ನುತ್ತಿದ್ದಾರೆ.
ಪೈಲ್ವಾನ್ ರಿಲೀಸ್ ಸಂಭ್ರಮ ಹೇಗಿದೆಯೆಂದರೆ, ಪೈಲ್ವಾನ್ ಕಟೌಟ್‍ಗೆ ಹಾಲಿನ ಅಭಿಷೇಕ ಮಾಡಿ ಹೂಮಳೆ ಸುರಿಸಿದ್ದಾರೆ. ಥಿಯೇಟರಿನಲ್ಲಿ ಕಿಚ್ಚನ ಎಂಟ್ರಿ ವೇಳೆ ಕರ್ಪೂರದಾರತಿ ಮಾಡಿ ಹಾರೈಸಿದ್ದಾರೆ. ಪೈಲ್ವಾನ್ ಚಿತ್ರದ ಪೋಸ್ಟರ್ ಎದುರು ಈಡುಗಾಯಿ ಹೊಡೆದಿದ್ದಾರೆ. ದೇವರಿಗೆ ಪೂಜೆ ಮಾಡಿಸಿ, ಪ್ರೇಕ್ಷಕರಿಗೆ ಪ್ರಸಾದ ಹಂಚಿದ್ದಾರೆ. ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಹೆಣ್ಣು ಮಕ್ಕಳಂತೂ ಜೊತೆ ಜೊತೆಯಾಗಿ ಯೂನಿಫಾರ್ಮಿನಲ್ಲಿ ಬಂದು ಕಿಚ್ಚನ ಸ್ಟೈಲಲ್ಲೇ ಪೋಸು ಕೊಟ್ಟು ಚಿತ್ರವನ್ನು ನೋಡಿ ಆನಂದಿಸಿದ್ದಾರೆ. ಕಿಚ್ಚ ಫುಲ್ ಹ್ಯಾಪಿ.