ಪೈಲ್ವಾನ್ ಸಿನಿಮಾ ರಿಲೀಸ್ ಆಗಿ ಕನ್ನಡದ ಪ್ರೇಕ್ಷಕರು ಮೆಚ್ಚಿ ಕೊಂಡಾಡುತ್ತಿದ್ದರೆ, ಬೇರೆ ಭಾಷೆಯ ಸ್ಟಾರ್ ನಟರು ಚಿತ್ರವನ್ನು ನೋಡುವ ಆಸೆ ತೋರಿಸಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಪೈಲ್ವಾನ್ ಚಿತ್ರವನ್ನು ಕುಟುಂಬದೊಂದಿಗೆ ನೋಡಲು ರೆಡಿಯಾಗಿದ್ದಾರೆ. ಅವರ ಜೊತೆಗೆ ಕಿಚ್ಚ ಸಾಥ್ ಕೊಡಬೇಕು. ಪೈಲ್ವಾನ್ ಪರ ಈಗಾಗಲೇ ಸಲ್ಲು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರವನ್ನೂ ಮಾಡಿದ್ದಾರೆ.
ಅತ್ತ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಕೂಡಾ ಪೈಲ್ವಾನ್ ನೋಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಸುದೀಪ್ ಅಭಿನಯದ ಚಿತ್ರಕ್ಕೆ ಸ್ಯಾಂಡಲ್‍ವುಡ್‍ನ ಎಲ್ಲ ಸ್ಟಾರ್‍ಗಳೂ ಶುಭ ಹಾರೈಸಿದ್ದಾರೆ.