ದಬಾಂಗ್ 3, ಸಲ್ಮಾನ್ ಖಾನ್ ಅಭಿನಯದ ಪ್ರಭುದೇವ ನಿರ್ದೇಶನದ ಸಿನಿಮಾ. ಕಿಚ್ಚ ಸುದೀಪ್, ಸಲ್ಮಾನ್ ಎದುರು ಪ್ರತಿನಾಯಕನಾಗಿ ನಟಿಸಿರುವ ಚಿತ್ರವಿದು. ಸ್ವತಃ ಸಲ್ಮಾನ್ ಖಾನ್, ಅರ್ಬಾಜ್ ಖಾನ್, ನಿಖಿಲ್ ದ್ವಿವೇದಿ ಚಿತ್ರದ ನಿರ್ಮಾಪಕರು. ಈ ಚಿತ್ರ ಡಿಸೆಂಬರ್ 20ರಂದು ರಿಲೀಸ್ ಆಗುತ್ತಿದ್ದು, ಕನ್ನಡದಲ್ಲೂ ಬರಲಿದೆ.
ಪೈಲ್ವಾನ್ ರಿಲೀಸ್ ಆಗುವುದಕ್ಕೆ 2 ದಿನ ಮೊದಲು ಕನ್ನಡದ ದಬಾಂಗ್ 3 ಟೀಸರ್ ಬಿಟ್ಟಿರುವ ಸಲ್ಮಾನ್, ಸ್ವತಃ ಕನ್ನಡದಲ್ಲಿಯೇ ಡಬ್ ಮಾಡಿದ್ದಾರೆ. ಟೈಮೂ ನಂದು..ತಾರೀಕೂ ನಂದು ಎನ್ನುವ ಸಲ್ಮಾನ್ ವಾಯ್ಸ್ ಇರುವ ಮೋಷನ್ ಪೋಸ್ಟರ್ ಹವಾ ಎಬ್ಬಿಸಿದೆ. ದಬಾಂಗ್ 3 ಒಟ್ಟು 4 ಭಾಷೆಗಳಲ್ಲಿ ಬರಲಿದೆ. ಒನ್ಸ್ ಎಗೇಯ್ನ್, ಇಲ್ಲಿಯೂ ಸಲ್ಮಾನ್ಗೆ ಸೋನಾಕ್ಷಿ ಸಿನ್ಹಾ ನಾಯಕಿ. ಒಟ್ಟಿನಲ್ಲಿ ಈ ಮೂಲಕ ಸಲ್ಮಾನ್ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.