ಪೈಲ್ವಾನ್ ಚಿತ್ರದ ಪೋಸ್ಟರ್ ರಿಲೀಸ್ ಆದಾಗ ಎಲ್ಲರೂ ಹುಬ್ಬೇರಿಸಿದ್ದರು. ಮೂಗಿನ ಮೇಲೆ ಬೆರಳಿಟ್ಟಿದ್ದರು. ಅಭಿಮಾನಿಗಳು ವಾರೆ ವ್ಹಾ ಎಂದಿದ್ದರು. ಈಗ ಚಿತ್ರ ರಿಲೀಸ್ ಆಗಿದೆ.ಕೃಷ್ಣ ಡೈರೆಕ್ಷನ್, ಸ್ವಪ್ನಾ ಕೃಷ್ಣ ನಿರ್ಮಾಣದಲ್ಲಿ ಸುದೀಪ್ ಇದೇ ಮೊದಲ ಬಾರಿಗೆ ಕುಸ್ತಿ ಪಟುವಾಗಿ ಕಾಣಿಸಿಕೊಂಡಿದ್ದಾರೆ. ದೇಹ ಪ್ರದರ್ಶನವೂ ಅದ್ಭುತವಾಗಿದೆ.
ಪ್ರೇಕ್ಷಕರ ಒಪ್ಪಿಗೆಗೂ ಮೊದಲೇ ಸುದೀಪ್ ಮೊದಲ ಗೆಲುವು ದಾಖಲಿಸಿದ್ದಾರೆ. ಅದೂ ಅವರ ಪ್ರೀತಿಯ ಮಗಳು ಸಾನ್ವಿಯ ಎದುರು. ನನ್ನ ಪೈಲ್ವಾನ್ ಪೋಸ್ಟರ್ ನೋಡಿ ನನ್ನ ಮಗಳು ವ್ಹಾವ್ ಎಂದರೂ.. ಆಮೇಲೆ ಪದೇ ಪದೇ ನಿಜಾನಾ ಅಂಥ ಕೇಳ್ತಾ ಇದ್ಲು. ಆಗ ಅವಳಿಗೆ ನಾನು ಜಿಮ್ ಮಾಡುತ್ತಿರುವ ದೃಶ್ಯಗಳನ್ನು ತೋರಿಸಿ ಪ್ರೂವ್ ಮಾಡಿದೆ. ನಿಜಕ್ಕೂ ಮಕ್ಕಳು ನನ್ನ ಸಿನಿಮಾ ಇಷ್ಟಪಡ್ತಾರೆ ಎಂದಿರುವ ಸುದೀಪ್, ಪೈಲ್ವಾನ್ ಚಿತ್ರದಿಂದಾಗಿ ನಾನು ಸರಿಯಾಗಿ ನಿದ್ದೆ, ಊಟ ಮತ್ತು ವರ್ಕೌಟ್ ಮಾಡುತ್ತಿದ್ದೇನೆ ಎಂದಿದ್ದಾರೆ. ಕೃಷ್ಣ ನಿರ್ದೇಶನದ ಪೈಲ್ವಾನ್ 5 ಭಾಷೆಗಳಲ್ಲಿ ಜಗತ್ತಿನಾದ್ಯಂತ ಏಕಕಾಲಕ್ಕೆ 3 ಸಾವಿರಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ರಿಲೀಸ್ ಆಗಿದೆ.