ಕಿಚ್ಚ ಸುದೀಪ್ ಬಾಕ್ಸರ್ ಮತ್ತು ಕುಸ್ತಿ ಪಟುವಾಗಿ ನಟಿಸಿರುವ ಪೈಲ್ವಾನ್ ರಿಲೀಸ್ ಆಗುತ್ತಿದೆ. ಅದೂ 5 ಭಾಷೆಗಳಲ್ಲಿ.. 4000ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ. ಸುದೀರ್ಘ ಗ್ಯಾಪ್ ನಂತರ ಬರುತ್ತಿರುವುದಕ್ಕೋ ಏನೋ.. ಅಭಿಮಾನಿಗಳ ಉತ್ಸಾಹ ಈ ಬಾರಿ ಮೇರೆ ಮೀರಿದೆ. ಸಂಭ್ರಮಕ್ಕೆ ಎಣೆಯೂ ಇಲ್ಲ.. ಮಿತಿಯೂ ಇಲ್ಲ.
ರಾಜ್ಯದ ಹಲವು ಥಿಯೇಟರುಗಳಲ್ಲಿ ಅಭಿಮಾನಿಗಳು ವಾರಕ್ಕೆ ಮೊದಲೇ ಅಲಂಕಾರ ಆರಂಭಿಸಿದ್ದಾರೆ. ಕಟೌಟು, ಬ್ಯಾನರು, ಹಾರ, ಪೋಸ್ಟರು ಹಾಕಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಹಲವು ಥಿಯೇಟರುಗಳಲ್ಲಿ ಥಿಯೇಟರುಗಳ ಬೋರ್ಡು ಕೂಡಾ ಕಾಣುತ್ತಿಲ್ಲ. ಇದು ಥಿಯೇಟರ್ ಎಂದು ಗೊತ್ತಾಗುವುದು ಅದನ್ನು ಮುಚ್ಚಿರುವ ಪೋಸ್ಟರ್‍ಗಳಿಂದಲೇ. ಕೃಷ್ಣ ನಿರ್ದೇಶನದ ಚಿತ್ರ ಪೈಲ್ವಾನ್ ಹಬ್ಬವಾಗುತ್ತಿದೆ.