` 10 ಸಾವಿರ ಸಂಬಳಕ್ಕೆ ಕೆಲಸ ಮಾಡಿದ್ದರು ಪುನೀತ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth rajkumar had once worked for 10k salary
Puneeth Rajkumar

ಪವರ್ ಸ್ಟಾರ್ ಪುನೀತ್, ಕನ್ನಡದ ಜನಪ್ರಿಯ ನಟ. ದುಬಾರಿ ಸಂಭಾವನೆ ಪಡೆಯುವ ಹೀರೋಗಳಲ್ಲಿ ಒಬ್ಬರು. ಆದರೆ, ಒಂದು ಕಾಲದಲ್ಲಿ ಅವರು ಕೂಡಾ ಕೆಲಸ ಮಾಡಿದ್ದರು. ಅದೂ ತಮ್ಮದೇ ಸಂಸ್ಥೆಯಲ್ಲಿ. ತಿಂಗಳ ಸಂಬಳ 10 ಸಾವಿರ ರೂ.

`ನನಗೆ ನನ್ನ ತಾಯಿ ಒಳ್ಳೆಯ ಬಟ್ಟೆ, ಓಡಾಡೋಕೆ ಕಾರು ಎಲ್ಲವನ್ನೂ ಕೊಟ್ಟಿದ್ದರು. ಆದರೆ, ಖರ್ಚಿಗೆ ಹಣ ಕೊಡುತ್ತಿರಲಿಲ್ಲ. ಎಷ್ಟು ಬೇಕೋ ಅಷ್ಟು. ಆಗ ನಾನು ವಜ್ರೇಶ್ವರಿ ಕಂಬೈನ್ಸ್‍ನಲ್ಲಿ 10 ಸಾವಿರ ಸಂಬಳಕ್ಕೆ ಕೆಲಸ ಮಾಡಿದ್ದೆ. ಸಂಸ್ಥೆಯ ಮಾಲೀಕರ ಮಗ ಎಂಬ ಮುಲಾಜನ್ನು ಕೆಲಸದಲ್ಲಿ ತೋರಿಸುವಂತಿರಲಿಲ್ಲ. ಕೆಲಸ ಮಾಡಲೇಬೇಕಿತ್ತು' ಎಂದು ಹೇಳಿಕೊಂಡಿದ್ದಾರೆ ಪುನೀತ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery