ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಇದೇ ವಾರ ತೆರೆ ಕಾಣುತ್ತಿದೆ. ಕೃಷ್ಣ ನಿರ್ದೇಶನದ ಚಿತ್ರದಲ್ಲಿ ಆಕಾಂಕ್ಷಾ ಸಿಂಗ್ ನಾಯಕಿ. ಸುನಿಲ್ ಶೆಟ್ಟಿ, ಕಿಚ್ಚನ ಗುರುವಾಗಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ಜಗತ್ತಿನಾದ್ಯಂತ ತೆರೆ ಕಾಣ್ತಿದೆ ಪೈಲ್ವಾನ್. ಈ 5 ಭಾಷೆಗಳಲ್ಲಿ ನಾಲ್ಕರಲ್ಲಿ ಸುದೀಪ್ ಅವರೇ ಡಬ್ ಮಾಡಿದ್ದಾರೆ.
ಕನ್ನಡದಲ್ಲಿ ಡಬ್ಬಿಂಗ್ ಸುಲಭ. ಕಾರಣ ಅದು ನಮ್ಮ ಭಾಷೆ. ಏಕಾಗ್ರತೆ ಸುಲಭ. ಡೈಲಾಗ್‍ನ್ನು ಇಂಪ್ರೂವ್ ಮಾಡುತ್ತಲೇ ಹೋಗಬಹುದು ಎನ್ನುವ ಸುದೀಪ್‍ಗೆ ತಮಿಳು, ತೆಲುಗು ಕಷ್ಟವೇನೂ ಆಗಲಿಲ್ಲ.
ತುಂಬಾ ಕಷ್ಟವಾಗಿದ್ದು ಹಿಂದಿ ಡಬ್ಬಿಂಗ್. ಹಿಂದಿ ಗೊತ್ತಿದ್ದರೂ ಡಬ್ ಮಾಡುವಾಗ ಕಷ್ಟ ಪಟ್ಟೆ ಎನ್ನುವ ಸುದೀಪ್, ಮಲಯಾಳಂನ್ನು ಮಾತ್ರ ಟ್ರೈ ಮಾಡೋಕೆ ಹೋಗಲಿಲ್ಲವಂತೆ.