` ಶೂಟಿಂಗ್ ಮುಗಿದ ಮೇಲೂ ಕಾಡಿದ ಸಿನಿಮಾ ರಂಗನಾಯಕಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ranganayaki heroine talks about her shooting experience
Aditi Prabhudeva

ರಂಗನಾಯಕಿ ಟ್ರೇಲರ್‍ಗೆ ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ಸಿಗುತ್ತಿದೆ. ನಿರ್ದೇಶಕ ದಯಾಳ್, ಈ ಬಾರಿ ಅತ್ಯಾಚಾರದ ವಸ್ತುವನ್ನೆತ್ತಿಕೊಂಡಿದ್ದಾರೆ. ನಿರ್ಭಯ ಬದುಕಿದ್ದರೆ ಕಾನೂನು ಮತ್ತು ಜೀವನವನ್ನು ಯಾವ ರೀತಿ ಎದುರಿಸಬೇಕಾಗಿತ್ತು ಎನ್ನುವ ಕಲ್ಪನೆಯಲ್ಲಿ ಅರಳಿದ ಚಿತ್ರ ರಂಗನಾಯಕಿ. ಆ ಪಾತ್ರಕ್ಕೆ ಜೀವ ತುಂಬಿರುವ ಆದಿತಿ ಪ್ರಭುದೇವ ತಮ್ಮ ಪಾತ್ರದ ಅನುಭವದ ಕುರಿತು ಹೇಳಿಕೊಂಡಿದ್ದಾರೆ.

`ಸಾಮಾನ್ಯವಾಗಿ ಯಾರಾದರೂ ಹುಡುಗರು ನಮ್ಮ ಮೈ ಮುಟ್ಟಿದರೇನೇ ಕೋಪ ಬರುತ್ತೆ. ಅಂಥಾದ್ದರಲ್ಲಿ ಗ್ಯಾಂಗ್‍ರೇಪ್ ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ಕೆಲವು ದೃಶ್ಯಗಳನ್ನು ಓದಿದಾಗ, ನಟಿಸಿದಾಗ ಕಣ್ಣೀರು ಹಾಕಿದ್ದೇನೆ. ನೆನಪಿಸಿಕೊಂಡು ನೆನಪಿಸಿಕೊಂಡು ಅತ್ತಿದ್ದೇನೆ. ಅಷ್ಟರಮಟ್ಟಿಗೆ ಈ ಪಾತ್ರ ನನ್ನನ್ನು ಕಾಡಿದೆ'' ಎಂದಿದ್ದಾರೆ ಆದಿತಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery