` ಬುದ್ದಿವಂತ 2 ಡೈರೆಕ್ಟರ್ ಚೇಂಜ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
buddhivantha 2 director replaced
nuddhivantha 2

ಐ ಲವ್ ಯೂ ನಂತರ ಉಪೇಂದ್ರ ನಟಿಸುತ್ತಿರುವ ಚಿತ್ರಗಳಲ್ಲಿ ಅತೀ ಹೆಚ್ಚು ಗಮನ ಸೆಳೆದಿರುವ ಚಿತ್ರ ಬುದ್ದಿವಂತ 2. ಈಗ ಇದೇ ಚಿತ್ರ ವಿವಾದದಿಂದ ಸುದ್ದಿಯಾಗುತ್ತಿದೆ. ಚಿತ್ರದ ನಿರ್ದೇಶಕ ಮೌರ್ಯ ಮತ್ತು ಉಪೇಂದ್ರ ನಡುವೆ ಸ್ಕ್ರಿಪ್ಟ್ ವಿಚಾರದಲ್ಲಿ ಹೊಂದಾಣಿಕೆ ಆಗಿಲ್ಲವಂತೆ. ಈ ಭಿನ್ನಾಭಿಪ್ರಾಯದಿಂದಾಗಿ ನಿರ್ದೇಶಕ ಮೌರ್ಯ, ಹಿಂದೆ ಸರಿದಿದ್ದಾರೆ ಎಂಬ ಸುದ್ದಿಯಿದೆ.

ಮೌರ್ಯ ಜಾಗಕ್ಕೆ ಆರ್.ಚಂದ್ರು ಬಳಿ ಕೆಲಸ ಮಾಡಿರುವ, ಐ ಲವ್ ಯೂ ಚಿತ್ರದ ಸಹ ನಿರ್ದೇಶಕ ಜಯರಾಮ್ ಎಂಟ್ರಿ ಕೊಟ್ಟಿದ್ದಾರೆ. ಚಿತ್ರವನ್ನು ಕೈಬಿಟ್ಟಿಲ್ಲ, ಕಥೆಯಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ ನಿರ್ಮಾಪಕ ಟಿ.ಆರ್.ಚಂದ್ರಶೇಖರ್. ಟೈಟಲ್ ಕಾರ್ಡ್‍ನಲ್ಲಿ ಮೌರ್ಯ ಹೆಸರೂ ಇರಲಿದೆಯಂತೆ.

ಉಪೇಂದ್ರ ಈ ಚಿತ್ರದಲ್ಲಿ ಡಬಲ್ ಆ್ಯಕ್ಟಿಂಗ್‍ನಲ್ಲಿ ನಟಿಸುತ್ತಿದ್ದು ಮೇಘನಾ ರಾಜ್ ಮತ್ತು ಸೋನಲ್ ಮಂಥೆರೋ ನಾಯಕಿಯರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery