ಅಮ್ಮಾ ನಾ ಸೇಲ್ ಆದೆ.. ಅಮೆರಿಕ ಪಾಲಾದೆ.. ಇದು ಕಾಶೀನಾಥ್ ಅವರ ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಚಿತ್ರದ ಸೂಪರ್ ಹಿಟ್ ಹಾಡು. ಆ ಹಾಡನ್ನು ಅಧ್ಯಕ್ಷ ಇನ್ ಅಮೆರಿಕ ಚಿತ್ರದಲ್ಲಿ ಮತ್ತೆ ಬಳಸಿಕೊಳ್ಳಲಾಗಿದೆ.
`ನಮ್ಮ ಚಿತ್ರದ ಸನ್ನಿವೇಶಕ್ಕೆ ಆ ಹಾಡು ಸೂಕ್ತವಾಗುತ್ತಿತ್ತು. ಹಾಗಂತ ನಾವು ಇಡೀ ಹಾಡನ್ನು ಪುನರ್ಬಳಕೆ ಮಾಡಿಲ್ಲ. ಹಾಡಿನ ಆರಂಭದ ಸಾಲನ್ನಷ್ಟೇ ಎತ್ತಿಕೊಂಡಿದ್ದೇವೆ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ' ಎಂದಿದ್ದಾರೆ ನಿರ್ದೇಶಕ ಯೋಗಾನಂದ್ ಮದ್ದಾನ್.
ಶರಣ್, ರಾಗಿಣಿ ಕಾಂಬಿನೇಷನ್ನಿನಲ್ಲಿ ಬರುತ್ತಿರುವ ಅಧ್ಯಕ್ಷ ಇನ್ ಅಮೆರಿಕ ಭರ್ಜರಿ ಹವಾ ಎಬ್ಬಿಸಿದೆ.