ಕನ್ನಡದ ಬ್ಯುಸಿ ಸ್ಟಾರಿಣಿ ಹರಿಪ್ರಿಯಾ ಮತ್ತೊಂದು ಚಿತ್ರಕ್ಕೆ ಯೆಸ್ ಎಂದಿದ್ದಾರೆ. ಸಿಂಗ ಖ್ಯಾತಿಯ ವಿಜಯ್ ಕಿರಣ್ ನಿರ್ದೇಶನದ ಚಿತ್ರಕ್ಕೆ ಜಯಣ್ಣ ನಿರ್ಮಾಪಕ. ಗುರುನಂದನ್ ಹೀರೋ.
` ಈ ಹಿಂದೆ ಜಯಣ್ಣ ಬ್ಯಾನರ್‍ನ ಬುಲೆಟ್ ಬಸ್ಯಾದಲ್ಲಿ ನಟಿಸಿದ್ದೆ. ಬೆಲ್‍ಬಾಟಂ ಚಿತ್ರದ ವಿತರಕ ಕೂಡಾ ಜಯಣ್ಣ. ಈಗ ಮತ್ತೊಮ್ಮೆ ಚಾನ್ಸ್ ಸಿಕ್ಕಿದೆ. ಪಾತ್ರವೂ ಚೆನ್ನಾಗಿದೆ. ಕಂಪ್ಲೀಟ್ ಜಾನರ್' ಎಂದಿದ್ದಾರೆ ಹರಿಪ್ರಿಯಾ.
ಕನ್ನಡ್ ಗೊತ್ತಿಲ್ಲ, ಎಲ್ಲಿದ್ದೆ ಇಲ್ಲಿ ತನಕ, ಬಿಚ್ಚುಗತ್ತಿ, ಕಥಾಸಂಗಮ.. ಹೀಗೆ ಸಾಲು ಸಾಲು ಚಿತ್ರಗಳು ಹರಿಪ್ರಿಯಾ ಲಿಸ್ಟಿನಲ್ಲಿವೆ.