ನಿಷ್ಕರ್ಷ ಮತ್ತೆ ರಿಲೀಸ್ ಆಗುತ್ತಿದೆ. ಬರೋಬ್ಬರಿ 26 ವರ್ಷಗಳ ನಂತರ. ಆ ಚಿತ್ರಕ್ಕೆ ನಿರ್ಮಾಪಕರು ಬಿ.ಸಿ.ಪಾಟೀಲ್. ಚಿತ್ರದಲ್ಲಿ ಖಳನಾಯಕರೂ ಅವರೇ. ಆದರೆ, ಅದಕ್ಕೂ ಮುನ್ನ ಬಿ.ಸಿ.ಪಾಟೀಲ್, ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಸಂಘರ್ಷ ಚಿತ್ರದಲ್ಲಿ ನಟಿಸಿದ್ದರು.
ಆಗ ಪೊಲೀಸ್ ಅಧಿಕಾರಿಯಾಗಿದ್ದ ಪಾಟೀಲ್, ಖುಷಿಯಾಗಿ ಆಗ ಡಿಸಿಪಿಯಾಗಿದ್ದ ಶಂಕರ್ ಬಿದರಿಯನ್ನೂ ಪ್ರೀಮಿಯರ್ ಶೋಗೆ ಕರೆದಿದ್ದರಂತೆ. ಚಿತ್ರವನ್ನು ನೋಡಿದ ಮೇಲೆ ಬಿದರಿ, ಪಾಟೀಲರಿಗೆ ಬೈದಿದ್ದರಂತೆ. ಮಾಡಿದ್ರೆ ಒಳ್ಳೆ ಪಾತ್ರ ಮಾಡು, ಸುಮ್ನೆ ಯಾಕ್ ಇಂಥ ಪಾತ್ರ ಮಾಡಿ ಹೆಸರು ಕೆಡಿಸ್ಕೊಳ್ತೀಯ ಎಂದಿದ್ದರಂತೆ. ಕಾರಣ ಇಷ್ಟೆ.. ಇಡೀ ಸಿನಿಮಾದಲ್ಲಿ ಬಿ.ಸಿ.ಪಾಟೀಲ್ ಕಾಣಿಸಿಕೊಳ್ಳೋದು ಒಂದೇ ಒಂದು ಸೀನ್‍ನಲ್ಲಿ.
ಆದರೆ ಅದಾದ ಮೇಲೆ ಬಿ.ಸಿ.ಪಾಟೀಲ್ ಇತಿಹಾಸವನ್ನೇ ಸೃಷ್ಟಿಸಿಬಿಟ್ಟರು.