ಕನ್ನಡದ ಸ್ಟಾರ್ ನಿರ್ಮಾಪಕರಲ್ಲಿ ಒಬ್ಬರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ, ಮಲಯಾಳಂನತ್ತ ಪಯಣ ಬೆಳೆಸಿದ್ದಾರೆ. ಮಲಯಾಳಂನಲ್ಲಿ ತಿಂಗಳಾಯ್ಚ ನಿಶ್ಚಯಂ ಅನ್ನೋ ಚಿತ್ರವನ್ನು ಶುರು ಮಾಡುತ್ತಿದ್ದಾರೆ. ನಿರ್ದೇಶಕರು ಸೆನ್ನಾ ಹೆಗ್ಡೆ. ಕನ್ನಡದಲ್ಲಿ ಕಥೆಯೊಂದು ಶುರುವಾಗಿದೆ ಚಿತ್ರದ ಮೂಲಕ ಗಮನ ಸೆಳೆದಿದ್ದ ಸೆನ್ನಾ ಹೆಗ್ಡೆ, ಮಲಯಾಳಂನಲ್ಲಿ ಒನ್ಸ್ ಎಗೇಯ್ನ್ ಪುಷ್ಕರ್ ಬ್ಯಾನರ್ ಮೂಲಕವೇ ಎಂಟ್ರಿ ಕೊಡುತ್ತಿದ್ದಾರೆ.
ಸೆನ್ನಾ ಹೆಗ್ಡೆ, ಕೇರಳದ ಗಡಿ ಭಾಗದವರು. ಕನ್ನಡದವರಾದರೂ, ಮಲಯಾಳಂ ಚೆನ್ನಾಗಿಯೇ ಗೊತ್ತು. ಹೀಗಾಗಿ ಪುಷ್ಕರ್ ಬ್ಯಾನರ್ ಮೂಲಕವೇ ಮಾಲಿವುಡ್ ಎಂಟ್ರಿ ಕೊಡುತ್ತಿದ್ದಾರೆ.
ಕನ್ನಡದಲ್ಲಿ ಗೋಧಿಬಣ್ಣ ಸಾಧಾರಣ ಮೈಕಟ್ಟು, ಕಿರಿಕ್ ಪಾರ್ಟಿ, ಹಂಬಲ್ ಪೊಲಿಟಿಷಿಯನ್ ನೊಗ್ರಾಜ್, ಕಥೆಯೊಂದು ಶುರುವಾಗಿದೆ ಚಿತ್ರಗಳನ್ನು ನಿರ್ಮಿಸಿ ಗೆದ್ದಿರುವ ಪುಷ್ಕರ್, ಭೀಮಸೇನ ನಳಮಹರಾಜ, ಅವನೇ ಶ್ರೀಮನ್ನಾರಾಯಣ, 777 ಚಾರ್ಲಿ, ಅವತಾರ್ ಪುರುಷ ಚಿತ್ರಗಳ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಯಲ್ಲೇ ಮಾಲಿವುಡ್ ಎಂಟ್ರಿ.