` ಚಿತ್ರಲೋಕದಲ್ಲಿ ಅಭಿಮಾನಿಗಳಿಗೆ ಕಿಚ್ಚ ಕೇಳಿದ ಪ್ರಶ್ನೆ ಇದು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep aska q question to his fans in chitraloka
KM Veeresh, Sudeep

ಕಿಚ್ಚ ಸುದೀಪ್ ಪೈಲ್ವಾನ್ ಹಬ್ಬಕ್ಕೆ ಸಜ್ಜಾಗುತ್ತಿದ್ದಾರೆ. ಅಭಿಮಾನಿಗಳು ಈಗಾಗಲೇ ಬಾರೋ ಪೈಲ್ವಾನ್ ಎನ್ನುತ್ತಾ ಹಬ್ಬದ ತೋರಣ ಕಟ್ಟುತ್ತಿದ್ದಾರೆ. ಸಿನಿಮಾ ರಿಲೀಸ್ ಆಗುತ್ತಿರುವುದು ಸೆಪ್ಟೆಂಬರ್ 12ಕ್ಕೆ.

ಪೈಲ್ವಾನ್ ಹಬ್ಬದ ಹಿನ್ನೆಲೆಯಲ್ಲಿಯೇ ಪ್ರಚಾರ ಹಮ್ಮಿಕೊಂಡಿರುವ ಸುದೀಪ್, ಚಿತ್ರಲೋಕ ಡಾಟ್ ಕಾಮ್ ಮೂಲಕ ಅಭಿಮಾನಿಗಳ ಎದುರು ಒಂದು ಪ್ರಶ್ನೆ ಇಟ್ಟಿದ್ದಾರೆ.

ಎಲ್ಲ ನನ್ನ ಸ್ನೇಹಿತರೇ ಚೆನ್ನಾಗಿದ್ದೀರಾ..? ಚಿತ್ರಲೋಕದಲ್ಲಿ ಒಂದು ಪ್ರಶ್ನೆ ಕೇಳಿ ಎಂದು ವೀರೇಶ್ ಕೇಳಿದ್ರು. ಇದು ನನ್ನ ಪ್ರಶ್ನೆ. ಪೈಲ್ವಾನ್ ಸಿನಿಮಾನ ಯಾರು ಕೂಡಾ ಇನ್ನೂ ನೋಡಿಲ್ಲ. ಆದರೂ ಕೂಡಾ ಬಂದಿರುವಂತಹ ಚಿಕ್ಕ ಫೋಟೋ, ಮೋಷನ್ ಪೋಸ್ಟರ್, ಟೀಸರ್, ಸಾಂಗ್ ಬೈಟ್ಸ್.. ಇವುಗಳನ್ನೇ ನೋಡಿಕೊಂಡು.. ಅವುಗಳನ್ನೇ ಹೆಗಲ ಮೇಲೆ ಹೊತ್ತುಕೊಂಡು.. ಬೆಳೆಸಿ ಪ್ರೀತಿಸಿದ್ರಲ್ಲ.. ಯಾಕೆ..? ಉತ್ತರ ಕೊಡಿ. ಕಾಯ್ತಾ ಇರ್ತೀನಿ.

https://twitter.com/chitraloka/status/1170634507097034752?s=12

ಹೌದು.. ಯಾಕೆ.. ಸುದೀಪ್ ನಿಮಗೆ ಇಷ್ಟವಾಗೋದ್ಯಾಕೆ..? ಕನ್ನಡದ ನಂ.1 ಸಿನಿಮಾ ವೆಬ್ಸೈಟ್ ಚಿತ್ರಲೋಕ ಮೂಲಕ ಸುದೀಪ್ ಕೇಳುತ್ತಿರುವ ಈ ಪ್ರಶ್ನೆಗೆ ಉತ್ತರ ಕೊಡಿ.