` ಪೈಲ್ವಾನ್ ಕಿಚ್ಚನಿಗೂ.. ವಾರಾಹಿಗೂ ಇದೆ ಬಿಡಿಸಲಾಗದ ಅನುಬಂಧ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
there is an interesting story between sudeep ad varahi chalan chitram
Sudeep

ವಾರಾಹಿ ಚಲನಚಿತ್ರಂ. ತೆಲುಗಿನ ಅತಿದೊಡ್ಡ ಬ್ಯಾನರ್. ಈ ಸಂಸ್ಥೆಯೇ ಈಗ ತೆಲುಗಿನಲ್ಲಿ ಪೆಹಲ್ವಾನ್ ಚಿತ್ರದ ವಿತರಣೆ ಹಕ್ಕು ಪಡೆದುಕೊಂಡಿರೋದು. ಅಂದಹಾಗೆ ಈ ಚಿತ್ರಕ್ಕೂ, ಸಂಸ್ಥೆಗೂ, ಸುದೀಪ್‍ಗೂ ಬಿಡಿಸಲಾರದ ಒಂದು ಬಂಧವಿದೆ. ಏಕೆಂದರೆ ಈ ಚಿತ್ರ ಸಂಸ್ಥೆಯ ಆರಂಭವೇ ಕಿಚ್ಚ ಸುದೀಪ್.

ಕಿಚ್ಚ ಸುದೀಪ್ ಅವರ ತೆಲುಗು ಬ್ಲಾಕ್‍ಬಸ್ಟರ್ ಈಗ ಚಿತ್ರವನ್ನು ನಿರ್ಮಿಸಿದ್ದು ಇದೇ ಸಂಸ್ಥೆ. ಅದು ವಾರಾಹಿಯ ಮೊದಲ ಸಿನಿಮಾ.

ಈಗ ಅದೇ ಸಂಸ್ಥೆ ಪೆಹಲ್ವಾನ್ ವಿತರಣೆ ಮಾಡುತ್ತಿದೆ. ಕನ್ನಡದ ಪೈಲ್ವಾನ್, ತೆಲುಗಿನಲ್ಲಿ ಪೆಹಲ್ವಾನ್ ಆಗಿದೆ. ಇದೇ 12ರಂದು ರಿಲೀಸ್ ಆಗುತ್ತಿರುವ ಪೈಲ್ವಾನ್‍ನ್ನು ಆಂಧ್ರ ಮತ್ತು ತೆಲಂಗಾಣದಲ್ಲಿ ರಿಲೀಸ್ ಮಾಡುತ್ತಿರುವುದು ಇದೇ ಸಂಸ್ಥೆ. ಕೆಜಿಎಫ್ ವಿತರಣೆ ಮಾಡಿದ್ದುದೂ ಇದೇ ಸಂಸ್ಥೆ. ಕಿಚ್ಚ ಮತ್ತೊಮ್ಮೆ ಮೋಡಿ ಮಾಡುವ ಎಲ್ಲ ಶುಭ ಸೂಚನೆಗಳೂ ಇವೆ.

#

Ayushmanbhava Movie Gallery

Damayanthi Audio and Trailer Launch Gallery