` ವಿಷ್ಣುವರ್ಧನ್‍ಗೇ ಥ್ರಿಲ್ ಕೊಟ್ಟಿದ್ದ ಪತ್ರಕರ್ತ.. ಆಮೇಲೆ ಶಾಕ್ ಕೊಟ್ಟಿದ್ದ ಕಥೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
25 years ago vishnuvardhan was shocked by that journalist
Nishkarsha Launch Image

ವಿಷ್ಣುವರ್ಧನ್, ಅನಂತ್ ನಾಗ್, ಬಿ.ಸಿ.ಪಾಟೀಲ್, ಸುಮನ್ ನಗರ್‍ಕರ್, ರಮೇಶ್ ಭಟ್.. ಹೀಗೆ ಹಲವು ಕಲಾವಿದರ ಸಂಗಮವಾಗಿದ್ದ ನಿಷ್ಕರ್ಷ, ಕನ್ನಡದ ಬೆಸ್ಟ್ ಥ್ರಿಲ್ಲರ್ ಸಿನಿಮಾಗಳಲ್ಲೊಂದು. ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಟಾಪ್ ಸಿನಿಮಾ. ಆ ಸಿನಿಮಾವನ್ನು ನಿರ್ಮಾಪಕ ಬಿ.ಸಿ.ಪಾಟೀಲ್ ರೀರಿಲೀಸ್ ಮಾಡುತ್ತಿದ್ದಾರೆ. ನಿಷ್ಕರ್ಷದ ಥ್ರಿಲ್‍ನ್ನು ಮತ್ತೆ ಅನುಭವಿಸಲು ವಿಷ್ಣು ಅಭಿಮಾನಿಗಳೂ ತುದಿಗಾಲಲ್ಲಿ ನಿಂತಿದ್ದಾರೆ. ಆ ನಿಷ್ಕರ್ಷ ಚಿತ್ರದ ಪ್ರೆಸ್‍ಮೀಟ್‍ನಲ್ಲಿ ನಡೆದಿದ್ದ ಘಟನೆ ಇದು.

ನಿಷ್ಕರ್ಷ ಚಿತ್ರಕ್ಕೆ ಮಯೂರ ಹೋಟೆಲ್‍ನಲ್ಲಿ ಮುಹೂರ್ತ ನೆರವೇರಿತ್ತು. ದಿನಾಂಕ : ಮೇ 12, 1993. ಶಂಕರ್ ಬಿದರಿ, ಕೆಂಪಯ್ಯ ಸೇರಿದಂತೆ ಸೀನಿಯರ್ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರೆಸ್‍ಮೀಟ್‍ನಲ್ಲಿ ವಿಷ್ಣುವರ್ಧನ್ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದರು. ಆ ವೇಳೆ ಪತ್ರಕರ್ತರ ಗ್ಯಾಲರಿಯಲ್ಲಿದ್ದ ಯಂಗ್ ಜರ್ನಲಿಸ್ಟ್ ಒಬ್ಬರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದರು.

ಪ್ರಶ್ನೆಗಳು ಎಷ್ಟೊಂದು ಇಂಟರೆಸ್ಟಿಂಗ್ ಆಗಿದ್ದವೆಂದರೆ ಆತನ ಪ್ರಶ್ನೆಗಳಿಗೆ ಸ್ವತಃ ವಿಷ್ಣುವರ್ಧನ್ ಕೂಡಾ ಥ್ರಿಲ್ಲಾಗಿದ್ದರು. ಹಲವು ಸೀನಿಯರ್ ಜರ್ನಲಿಸ್ಟುಗಳೂ ಆಸಕ್ತಿಯಿಂದ ಆ ಯುವ ಪತ್ರಕರ್ತ ಮತ್ತು ವಿಷ್ಣು ಜುಗಲ್‍ಬಂದಿ ನೋಡುತ್ತಿದ್ದರು. ಹೀಗೆ ಪ್ರಶ್ನೆ ಕೇಳುತ್ತಾ ಇದ್ದ ಆ ಯುವಕ, ಪ್ರಶ್ನೆಗಳು ಮುಗಿಯುತ್ತಿದ್ದಂತೆ ಎದ್ದು ಹೊರಟೇ ಬಿಟ್ಟ. ವಿಷ್ಣು ಸೇರಿದಂತೆ ಎಲ್ಲರಿಗೂ ಶಾಕ್.

ಸಾಮಾನ್ಯವಾಗಿ ಸುದ್ದಿಗೋಷ್ಠಿಗಳು ಮುಗಿಯುವ ಮೊದಲೇ ಪತ್ರಕರ್ತರು ಹೊರಹೋಗುವುದಿಲ್ಲ. ಅದರಲ್ಲೂ ವಿಷ್ಣುರಂತಹ ಸೀನಿಯರ್ ನಟರಿದ್ದಾಗ ಪತ್ರಕರ್ತರೂ ಅಷ್ಟೇ ಶಿಸ್ತುಬದ್ಧರಾಗಿರುತ್ತಾರೆ. ಆದರೆ, ಅಷ್ಟೆಲ್ಲ ರೋಮಾಂಚನ ಹುಟ್ಟಿಸಿದ್ದ ಪತ್ರಕರ್ತ ಇದ್ದಕ್ಕಿದ್ದಂತೆ ಎದ್ದು ಹೋಗಿದ್ದೇಕೆ ಎಂದು ವಿಷ್ಣು ಕೂಡಾ ಗಾಬರಿಯಾದರು.

ತಕ್ಷಣ ತಮ್ಮ ಸಹಾಯಕನನ್ನು ಆ ಯುವಕನನ್ನು ಹುಡುಕಿ ಮತ್ತೆ ಕರೆದುತರುವಂತೆ ಕಳಿಸಿಕೊಟ್ಟರು. ಆ ಯುವಕನ ಬೆನ್ನು ಹತ್ತಿ ಹೋದ ವಿಷ್ಣು ಸಹಾಯಕ ತಂದ ಉತ್ತರ, ವಿಷ್ಣು ಸೇರಿದಂತೆ ಎಲ್ಲ ಪತ್ರಕರ್ತರಿಗೂ ಶಾಕ್ ಕೊಟ್ಟಿತ್ತು.

ಹಾಗೆ ಹೊರಗೆ ಹೋಗಿದ್ದ ಆ ಯಂಗ್ ಜರ್ನಲಿಸ್ಟ್, ಪತ್ರಕರ್ತನೇ ಆಗಿರಲಿಲ್ಲ. ವಿಷ್ಣುವರ್ಧನ್‍ಗೇ ರೋಮಾಂಚನಗೊಳಿಸಿದ್ದ ಆತ ವಿಷ್ಣು ಅಭಿಮಾನಿಯಾಗಿದ್ದ ಮತ್ತು ಆಟೋ ಡ್ರೈವರ್ ಆಗಿದ್ದ. ಸುದ್ದಿಗೋಷ್ಟಿಯ ನಡುವೆ ಎದ್ದು ಹೋದ ಅವನನ್ನು ಹುಡುಕಿತರಲು ಹೋದ ಸಹಾಯಕರಿಗೆ ಕಂಡಿದ್ದು ಆಟೋ ಡ್ರೈವರ್ ಯೂನಿಫಾರ್ಮಲ್ಲಿ ಆಟೋ ಓಡಿಸಿಕೊಂಡು ಹೋದ ಯುವಕ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery