ಚಮಕ್, ಅಯೋಗ್ಯ, ಬೀರ್ಬಲ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರಗಳ ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಹೊಸ ಸಿನಿಮಾ ಶುರು ಮಾಡಿದ್ದಾರೆ. ಕೃಷ್ಣ ಅಜೇಯ್ ರಾವ್ ನಾಯಕತ್ವದಲ್ಲಿ ಹೊಸ ಸಿನಿಮಾ ಸೆಟ್ಟೇರಿದೆ. ಟೈಟಲ್ ಶೋಕಿವಾಲ.
ಹಳ್ಳಿ ಸೊಗಡಿನ ಕಥೆಗೆ ತಿಮ್ಮೇಗೌಡ ಜಾಕಿ ಎಂಬುವವರು ನಿರ್ದೇಶಕ. ತಿಮ್ಮೇಗೌಡರಿಗೆ ಇದು ಮೊದಲ ಸಿನಿಮಾ. ಚಿತ್ರದ ನಾಯಕಿಯಾಗಿ ಸಂಜನಾ ಆನಂದ್ ಇದ್ದಾರೆ. ಲುಂಗಿ, ಬನಿಯನ್ನು, ಕೂಲಿಂಗ್ ಗ್ಲಾಸ್ನಲ್ಲಿರೋ ಕೃಷ್ಣ ಅಜೇಯ್ ರಾವ್ ಅವರ ಲುಕ್ಕು ಚಿತ್ರದಲ್ಲಿ ಮಜಾ ಕಥೆಯಿದೆ ಅನ್ನೋದ್ರ ಸುಳಿವು ಕೊಟ್ಟಿದೆ.