ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರದ ಚಿತ್ರೀಕರಣ ಸೆಟ್ಟಿನಲ್ಲಿ ಬೆಂಕಿ ಬಿದ್ದಿದೆ. ಅಗ್ನಿ ಅವಘಡದಲ್ಲಿ ಧ್ರುವ ಸರ್ಜಾ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂಬ ಸುದ್ದಿ ಇದ್ದಕ್ಕಿದ್ದಂತೆ ಹಬ್ಬಿದೆ. ಪೊಗರು ಶೂಟಿಂಗ್ ಹೈದರಾಬಾದ್ನಲ್ಲಿ ನಡೆಯುತ್ತಿದ್ದು, ಕ್ಲೈಮಾಕ್ಸ್ ಶೂಟಿಂಗ್ ಮಾಡುತ್ತಿದ್ದಾರೆ ನಿರ್ದೇಶಕ ನಂದಕಿಶೋರ್.
ಚಿತ್ರದ ಬಗ್ಗೆ ಹಬ್ಬಿದ ಈ ಸುದ್ದಿಯೆಲ್ಲ ಸುಳ್ಳು ಎಂದು ಸ್ಪ್ಟಪಡಿಸಿದೆ ಚಿತ್ರತಂಡ. ಹರಿದಾಡುತ್ತಿರುವ ಫೋಟೋ ಕೂಡಾ ಶೂಟಿಂಗ್ನದ್ದೇ. ಸೀನ್ನಲ್ಲಿ ಬಾಂಬ್ ಸ್ಫೋಟಿಸುವ ದೃಶ್ಯದ ಫೋಟೋ. ಅಷ್ಟೇ ಹೊರತು ಚಿತ್ರೀಕರಣದಲ್ಲಿ ಯಾವುದೇ ಅನಾಹುತ, ಅವಘಡ, ಆಕಸ್ಮಿಕ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದೆ ಪೊಗರು ಟೀಂ.