ದಯಾಳ್ ಪದ್ಮನಾಭನ್ ನಿರ್ದೇಶನದ ರಂಗನಾಯಕಿ ಚಿತ್ರದ ಟ್ರೇಲರ್ ಹೊರಬಿದ್ದಿದೆ. ಟ್ರೇಲರ್‍ಗೆ ವ್ಯಾಲ್ಯೂಮ್ 1 ವರ್ಜಿನಿಟಿ ಎಂದು ಹೆಸರಿಟ್ಟು ಟ್ರೇಲರ್ ಬಿಟ್ಟಿದ್ದಾರೆ ದಯಾಳ್. ಬಜಾರ್, ಸಿಂಗ ಚಿತ್ರಗಳಲ್ಲಿ ಗ್ಲಾಮರ್ ಗೊಂಬೆಯಾಗಿ ಮಿಂಚಿದ್ದ ಆದಿತಿ ಪ್ರಭುದೇವ, ರಂಗನಾಯಕಿಯಲ್ಲಿ ಬೆರಗು ಹುಟ್ಟಿಸುತ್ತಾರೆ.
ಅತ್ಯಾಚಾರಕ್ಕೊಳಗಾಗುವ ನಾಯಕಿ, ನ್ಯಾಯಕ್ಕಾಗಿ ಹೋರಾಡುವ ಯುವತಿ, ಡ್ರಗ್ಸ್, ಹೆಜ್ಜೆ ಹೆಜ್ಜೆಗೂ ಹಿಂಸೆ ನೀಡುವ ಸಿಸ್ಟಂ, ಪ್ರತೀಸುವ ಹುಡುಗ.. ಹೀಗೆ ಹಲವು ಮಜಲುಗಳನ್ನು ಒಂದೇ ಟ್ರೇಲರ್‍ನಲ್ಲಿ ಪುಟ್ಟ ಪುಟ್ಟ ದೃಶ್ಯಗಳೊಂದಿಗೆ ಕಟ್ಟಿಕೊಟ್ಟಿದ್ದಾರೆ ದಯಾಳ್.
ಆದಿತಿ ಪ್ರಭುದೇವ, ಶ್ರೀನಿ, ತ್ರಿವಿಕ್ರಮ್, ಸುಚೇಂದ್ರ ಪ್ರಸಾದ್ ನಟಿಸಿರುವ ಚಿತ್ರಕ್ಕೆ ಎಸ್.ವಿ.ನಾರಾಯಣ್ ನಿರ್ಮಾಪಕ.