` ಪೈಲ್ವಾನನಿಗೆ ರಮೇಶ್ ಅರವಿಂದ್ ಸಾಥ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ramesh aravond lends voice for sudeep's pailwan
Ramesh Aravind, Sudeep

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್‍ಗೆ ಈಗ ರಮೇಶ್ ಅರವಿಂದ್ ಕೂಡಾ ಜೊತೆಯಾಗಿದ್ದಾರೆ. ಸೆಪ್ಟೆಂಬರ್ 12ರಂದು ರಿಲೀಸ್ ಆಗುತ್ತಿರುವ ಪೈಲ್ವಾನ್ ಚಿತ್ರದಲ್ಲಿ ಹಿನ್ನೆಲೆ ಧ್ವನಿ ನೀಡಿದ್ದಾರೆ ರಮೇಶ್ ಅರವಿಂದ್. ಅಂದಹಾಗೆ ಇದು ಕನ್ನಡದಲ್ಲಿ ಮಾತ್ರ. ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಧ್ವನಿಗಳಿವೆ.

ಪೈಲ್ವಾನ್ ಅಮೆರಿಕ, ಆಸ್ಟ್ರೇಲಿಯಾ, ಕುವೈತ್, ದುಬೈ, ಬ್ರಿಟನ್, ಕತಾರ್, ಸಿಂಗಾಪುರ ಸೇರಿದಂತೆ ಹಲವಾರು ದೇಶಗಳಲ್ಲಿ ಪ್ರಪಂಚದಾದ್ಯಂತ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ.

ಕಿಚ್ಚ ಸುದೀಪ್ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಕುಸ್ತಿ ಪಟುವಾಗಿ ನಟಿಸಿದ್ದು, ಸುನಿಲ್ ಶೆಟ್ಟಿ ಕಿಚ್ಚನ ಗುರುವಾಗಿದ್ದಾರೆ. ಆಕಾಂಕ್ಷಾ ಸಿಂಗ್ ಕಿಚ್ಚನ ಹೀರೋಯಿನ್. ಕೃಷ್ಣ ನಿರ್ದೇಶನದ ಚಿತ್ರಕ್ಕೆ ಸ್ವಪ್ನಾ ಕೃಷ್ಣ ನಿರ್ಮಾಪಕಿ. 

 

Sri Bharaha Baahubali Pressmeet Gallery

Maya Bazaar Pressmeet Gallery