ಸಾಹೋ ಅಬ್ಬರದಲ್ಲಿ ಎರಡು ದಿನ ಮಲ್ಟಿಪ್ಲೆಕ್ಸ್ ದೌರ್ಜನ್ಯಕ್ಕೆ ಗುರಿಯಾಗಿದ್ದ ನನ್ನ ಪ್ರಕಾರ, ಸಾಹೋ ಫ್ಲಾಪ್ ಎನಿಸಿದ್ದೇ ತಡ.. ಮತ್ತೆ ಮೋಡಿ ಮಾಡೋಕೆ ಶುರು ಮಾಡಿದೆ. ಪ್ರೇಕ್ಷಕರಿಂದ, ವಿಮರ್ಶಕರಿಂದ ಡಿಫರೆಂಟ್ ಸಿನಿಮಾ ಎನಿಸಿಕೊಂಡಿದ್ದ ನನ್ನ ಪ್ರಕಾರ ಸಿನಿಮಾಗೆ ಪ್ರೇಕ್ಷಕರು ತುಂಬುತ್ತಿದ್ದಾರೆ. ಇದರ ನಡುವೆಯೇ ಇನ್ನೊಂದು ಗುಡ್ ನ್ಯೂಸ್.
ನನ್ನ ಪ್ರಕಾರ ಚಿತ್ರವನ್ನು ಹಿಂದಿಯಲ್ಲಿ ರೀಮೇಕ್ ಮಾಡಲಾಗುತ್ತಿದ್ದು, ಅಜಯ್ ದೇವಗನ್ ಹೀರೋ ಆಗಲಿದ್ದಾರೆ ಎಂಬ ಮಾಹಿತಿ ಹೊರಬರುತ್ತಿದೆ. ಕಿಶೋರ್ ನಿರ್ವಹಿಸಿದ್ದ ಪಾತ್ರದಲ್ಲಿ ಅಜಯ್ ದೇವಗನ್ ನಟಿಸಲಿದ್ದಾರಂತೆ. ಪ್ರಿಯಾಮಣಿ, ಕಿಶೋರ್, ಮಯೂರಿ ಅಭಿನಯದ ಚಿತ್ರಕ್ಕೆ ವಿನಯ್ ಬಾಲಾಜಿ ನಿರ್ದೇಶಕ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವಲ್ಲಿ ಗೆದ್ದಿದೆ.