ವಿನಯ್ ರಾಜ್‍ಕುಮಾರ್, ಪುಷ್ಕರ್ ಮಲ್ಲಿಕಾರ್ಜುನಯ್ಯ ಬ್ಯಾನರಿನ ಹೊಸ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತಿದೆ ತಾನೇ. ಆ ಚಿತ್ರಕ್ಕಾಗಿ ವಿನಯ್ ಪ್ರತಿದಿನ ಬಾಕ್ಸಿಂಗ್ ತರಬೇತಿ ಮಾಡುತ್ತಿದ್ದಾರೆ. ಕರಮ್ ಚಾವ್ಲಾ ನಿರ್ದೇಶನದ ಈ ಚಿತ್ರಕ್ಕೆ ನಾಯಕಿ ಯಾರು ಎಂಬ ಪ್ರಶ್ನೆ ಇತ್ತಾದರೂ, ಆಯ್ಕೆ ಮುಗಿದಿರಲಿಲ್ಲ. ನಟಿ ಅನುಷಾ ರಂಗನಾಥ್ ಈಗ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಚಿತ್ರದಲ್ಲಿ ನನ್ನದು ಪ್ರಬುದ್ಧ ಹುಡುಗಿಯ ಪಾತ್ರ. ಹೀರೋ ಮತ್ತು ನಾನು ಇಬ್ಬರೂ ಅನಾಥರು. ಒಬ್ಬರಿಗೊಬ್ಬರು ಆಸರೆಯಾಗಿರುತ್ತೇವೆ. ಗಟ್ಟಿಯಾದ ಪಾತ್ರ ಎಂದಿದ್ದಾರೆ ಅನುಷಾ.
ಅಡಿಷನ್ ಮೂಲಕವೇ ಆಯ್ಕೆಯಾಗಿರುವ ಅನುಷಾ ರಂಗನಾಥ್, ಚಿತ್ರದ ರಿಹರ್ಸಲ್‍ನಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ರಿಹರ್ಸಲ್ ಕೂಡಾ ಶುರುವಾಗಿದೆ.