` ಬೈ ಬೈ ನವರಂಗ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
navrang theatre's demolition begins
Navrang Theatre

ನವರಂಗ್.. ಇದು ಬೆಂಗಳೂರಿಗೆ ಕೇವಲ ಸಿನಿಮಾ ಥಿಯೇಟರ್ ಅಲ್ಲ.. ಅದೊಂದು ಐಕಾನ್.. ಅದೊಂದು ಅಡ್ರೆಸ್. ಈಗ ಆ ಥಿಯೇಟರ್ ಬಾಗಿಲು ಮುಚ್ಚಿದೆ. ಚಿತ್ರಮಂದಿರದ ಮಾಲೀಕ ಕೆ.ಸಿ.ಮೋಹನ್ ಥಿಯೇಟರ್‍ನ್ನು ಮುಚ್ಚಿದ್ದಾರೆ.

ನವರಂಗ್ ಚಿತ್ರಮಂದಿರದಲ್ಲಿ ಮೊದಲು ರಿಲೀಸ್ ಆಗಿದ್ದ ಚಿತ್ರ ವೀರಕೇಸರಿ. 1961ರ ಜೂನ್ 30ರಂದು ಆಗಿನ ಸಿಎಂ ಬಿ.ಡಿ. ಜತ್ತಿ ಚಿತ್ರಮಂದಿರಕ್ಕೆ ಶಂಕುಸ್ಥಾಪನೆ ಮಾಡಿದ್ದರೆ, 1063, ಆಗಸ್ಟ್ 22ರಂದು ಉದ್ಘಾಟಿಸಿದ್ದವರು ನಿಜಲಿಂಗಪ್ಪ. ಈಗ ಆಗಸ್ಟ್‍ನಲ್ಲಿಯೇ ಬಾಗಿಲು ಮುಚ್ಚಿದೆ ನವರಂಗ್. ಈ ಜಾಗವನ್ನು ಕೆಸಿಎನ್ ಮೋಹನ್ ಆಗಿನ ಕಾಲಕ್ಕೇ 85 ಸಾವಿರ ರೂ.ಗೆ ಖರೀದಿಸಿದ್ದರು.

ಚಿತ್ರಮಂದಿರವನ್ನು ಒಡೆದು ಹಾಕಿ, ಇದೇ ಜಾಗದಲ್ಲಿ ಮಲ್ಟಿಪ್ಲೆಕ್ಸ್ ಕಟ್ಟಿಸಲು ಮುಂದಾಗಿದ್ದಾರೆ ಮೋಹನ್. ನವರಂಗ್ ಥಿಯೇಟರ್ ಮಲ್ಟಿಪ್ಲೆಕ್ಸ್ ರೂಪದಲ್ಲಿ ಪ್ರತ್ಯಕ್ಷವಾಗಲಿದೆ. ಅಲ್ಲಿಯವರೆಗೂ.. ಬೈ ಬೈ ನವರಂಗ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery