ಪೈಲ್ವಾನ್ ಚಿತ್ರದ ಕಣ್ಮಣಿಯೇ.. ಕಣ್ಣು ಹೊಡೆಯೇ.. ಹಾಡಿನ ಟೀಸರ್ ಹೊರಬಂದಿದೆ. ಇದು ಬಾಲಿವುಡ್ ಸ್ಟೈಲ್. ಬಾಲಿವುಡ್‍ನಲ್ಲಿ ಹಾಡಿನ ಲಿರಿಕಲ್ ವಿಡಿಯೋ ಬಿಟ್ಟ ನಂತರ ಹಾಡಿನ ಸಣ್ಣ ತುಣುಕಿನ ಟೀಸರ್ ಹೊರತರುತ್ತಾರೆ. ಅದೇ ಹೆಜ್ಜೆಯಲ್ಲಿ ಮುಂದುವರೆದಿದೆ ಪೈಲ್ವಾನ್ ಟೀಂ.
ಕಿಚ್ಚ ಸುದೀಪ್ ಇಲ್ಲಿ ಕಣ್ಣು ಹೊಡೆಯೋದು ಆಕಾಂಕ್ಷಾ ಸಿಂಗ್ ಅವರಿಗೆ. ಹಾಡಿನ ಮೇಕಿಂಗ್ ಅದ್ಧೂರಿಯಾಗಿದೆ ಅನ್ನೋದಕ್ಕೆ ಸಾಕ್ಷಿ ಟೀಸರ್. ಅರ್ಜುನ್ ಜನ್ಯಾ ಸಂಗೀತದಲ್ಲಿ ಸಂಚಿತ್ ಹೆಗ್ಡೆ ಹಾಡಿರುವ ಹಾಡು ಮಜಬೂತಾಗಿದೆ.
ಸ್ವಪ್ನಾ ಕೃಷ್ಣ ನಿರ್ಮಾಣದ ಪೈಲ್ವಾನ್‍ಗೆ ಕೃಷ್ಣ ನಿರ್ದೇಶಕ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ ಪೈಲ್ವಾನ್.