ಕನ್ನಡದ ಚಿತ್ರಗಳಿಗೆ ಬೇರೆ ಭಾಷೆಗಳ, ರಾಜ್ಯದ ಮಾರುಕಟ್ಟೆ ನಿಧಾನವಾಗಿ ಓಪನ್ ಆಗುತ್ತಿದೆ. ಕೆಜಿಎಫ್ ಸದ್ದು ಮಾಡಿದ ನಂತರವಂತೂ ದೊಡ್ಡ ಮಟ್ಟದಲ್ಲಿಯೇ ಕನ್ನಡ ಚಿತ್ರಗಳು ಸದ್ದು ಮಾಡುತ್ತಿವೆ. ಈಗ ಕುರುಕ್ಷೇತ್ರವೂ ಭರ್ಜರಿಯಾಗಿಯೇ ಸದ್ದು ಮಾಡಿದೆ. ಮುಂದಿನ ವಾರ ಕಿಚ್ಚ ಸುದೀಪ್‍ರ ಪೈಲ್ವಾನ್ ತೆರೆ ಕಾಣುತ್ತಿದೆ. ಈಗ ಶಿವಣ್ಣ ಕೂಡಾ ಅದೇ ರೀತಿ ಹೆಜ್ಜೆಯಿಟ್ಟಿದ್ದಾರೆ.
ಎ. ಹರ್ಷ ನಿರ್ದೇಶನದ ಭಜರಂಗಿ 2 ಚಿತ್ರವನ್ನು 5 ಭಾಷೆಗಳಲ್ಲಿ ರಿಲೀಸ್ ಮಾಡುವ ನಿಟ್ಟಿನಲ್ಲಿಯೇ ಪ್ಲಾನ್ ಮಾಡಲಾಗಿದೆ. ನಿರ್ಮಾಪಕ ಜಯಣ್ಣ ನಿರ್ಮಾಣದ ಭಜರಂಗಿ 2 ಚಿತ್ರವನ್ನು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲು.. ಅದೇ ರೀತಿ ಕಥೆಯನ್ನು ಸಿದ್ಧಮಾಡಿಕೊಂಡೇ ಅಖಾಡಕ್ಕಿಳಿಯುತ್ತಿದ್ದಾರೆ ಹರ್ಷ. ಸೆಪ್ಟೆಂಬರ್ 9ರಿಂದ ಭಜರಂಗಿ 2 ಶೂಟಿಂಗ್ ಶುರುವಾಗಲಿದೆ.