ಪರಭಾಷೆಯ ದೊಡ್ಡ ದೊಡ್ಡ ಸ್ಟಾರ್ಗಳ ಚಿತ್ರಗಳು ಬಂದಾಗ ಮೊದಲ ಹೊಡೆತ ಬೀಳುವುದೇ ಕನ್ನಡದ ಚಿತ್ರಗಳ ಮೇಲೆ. ಅದು ಈ ಬಾರಿಯೂ ನಿಜವಾಗಿದೆ. ಸಾಹೋ ಚಿತ್ರಕ್ಕೆ ಕನ್ನಡದ ಚಿತ್ರಗಳು ಬಲಿಯಾಗಿವೆ. ಸಾಹೋ ಚಿತ್ರಕ್ಕಾಗಿ ಅತಿ ದೊಡ್ಡ ಹೊಡೆತ ತಿಂದಿರುವುದು ನನ್ನ ಪ್ರಕಾರ ಚಿತ್ರ.
ಪ್ರಿಯಾಮಣಿ, ಕಿಶೋರ್ ಅಭಿನಯದ ವಿನಯ್ ಬಾಲಾಜಿ ನಿರ್ದೇಶನದ ನನ್ನ ಪ್ರಕಾರ, ಕಥೆ ಮತ್ತು ಮೇಕಿಂಗ್ನಿಂದಾಗಿ ಗಮನ ಸೆಳೆದಿತ್ತು. ಸಿನಿಮಾ ಥಿಯೇಟರುಗಳಲ್ಲಿ ಕಚ್ಚಿಕೊಳ್ಳುತ್ತಿರುವಾಗಲೇ ರಿಲೀಸ್ ಆಯ್ತು ಸಾಹೋ. ಈಗ ನನ್ನ ಪ್ರಕಾರ ಚಿತ್ರ ಕೆಲವೇ ಕೆಲವು.. ಬೆರಳೆಣಿಕೆ ಚಿತ್ರಮಂದಿರಗಳಲ್ಲಿ ಮಾತ್ರವೇ ಲಭ್ಯ. ಚಿತ್ರತಂಡದವರು ಏನೆಲ್ಲ ಹೋರಾಡಿದರೂ.. ಪ್ರೇಕ್ಷಕರ ಬೆಂಬಲ ಸಿಗುತ್ತಿದ್ದರೂ.. ಚಿತ್ರಮಂದಿರದಲ್ಲಿ ಚಿತ್ರವೇ ಇಲ್ಲ. ಸಾಹೋ ನುಂಗಿಬಿಟ್ಟಿದೆ.
ಕುರುಕ್ಷೇತ್ರ ಚಿತ್ರಕ್ಕೂ ಸಾಹೋ ಪ್ರದರ್ಶನದ ಬಿಸಿ ತಟ್ಟಿದೆ. ಅಂದಹಾಗೆ ಸಾಹೋ ಚಿತ್ರಕ್ಕೆ ಓಪನಿಂಗ್ ದಿನ ಒಂದು ಟಿಕೆಟ್ ದರ 750 ರೂ. ಇತ್ತು. ಪ್ರೇಕ್ಷಕರನ್ನು ಸುಲಿಗೆ ಮಾಡುವ ಅವಕಾಶ ದೊಡ್ಡದೋ.. ಕನ್ನಡ ಚಿತ್ರಗಳ ಮೇಲಿನ ಮಮಕಾರ ದೊಡ್ಡದೋ.. ನೋ ವೇ.. ದುಡ್ಡಿಗೇ ಜೈ ಎಂದಿರುವ ಮಲ್ಟಿಪ್ಲೆಕ್ಸ್ ಮಾಲೀಕರು.. ಕನ್ನಡ ಚಿತ್ರಗಳನ್ನೇ ಕೈಬಿಟ್ಟಿದ್ದಾರೆ. ಬಲಿಯಾಗಿರುವುದು ನನ್ನ ಪ್ರಕಾರ.