ಕಿಚ್ಚ ಸುದೀಪ್ ಎದುರು ನಟಿಸುವಾಗ ವಿಲನ್ ಪಾತ್ರ ಮಾಡುವವರು ಸುದೀಪ್‍ಗೆ ಹೊಡೆಯುವ, ಒದೆಯುವ ದೃಶ್ಯಗಳಿದ್ದರೆ ಹಿಂದೇಟು ಹಾಕುತ್ತಾರೆ. ಅದು ಸೀನಿಯರ್ ಆಗುತ್ತಾ ಹೋದಂತೆ ಎದುರಿಸಲೇಬೇಕಾದ ಅತಿದೊಡ್ಡ ಸವಾಲು. ಶಬ್ಧವೇದಿ ಚಿತ್ರದಲ್ಲಿ ಡಾ.ರಾಜ್ ಅವರಿಗೆ ಹೊಡೆಯುವ ಸೀನ್ ಮಾಡು ಎಂದಿದ್ದಕ್ಕೆ, ಶೋಭರಾಜ್ ಎಸ್. ನಾರಾಯಣ್ ಅವರ ಜೊತೆ ಹೆಚ್ಚೂ ಕಡಿಮೆ ಜಗಳಕ್ಕೆ ಬಿದ್ದಿದ್ದನ್ನು ಚಿತ್ರರಂಗ ನೋಡಿದೆ. ಆದರೆ, ತಮ್ಮ ಎದುರು ಹಾಗೆ ಹಿಂದೇಟು ಹಾಕುವವರಿಗೆ ಏಯ್.. ಬಿಡ್ರಪ್ಪ... ಇದೆಲ್ಲ ಸಿನಿಮಾ ಕಣ್ರೋ.. ನೋ ಪ್ರಾಬ್ಲಂ.. ಎನ್ನುತ್ತಿದ್ದ ಸುದೀಪ್ ಅವರಿಗೆ ಆ ಕಷ್ಟ ಅರ್ಥವಾಗಿದ್ದು ಸಲ್ಮಾನ್ ಖಾನ್ ಎದುರು ನಟಿಸುವಾಗ.
ನಟ ಸುದೀಪ್‍ಗೆ ಇಂಗ್ಲಿಷ್ ಸಲೀಸು.. ಹಿಂದಿ ಭಾರೀ ತುಟ್ಟಿ. ಹೀಗಾಗಿ ಡೈಲಾಗುಗಳನ್ನು ಒಟ್ಟಿಗೇ ಕೊಡಬೇಡಿ ಎಂದು ಪ್ರಭುದೇವ ಬಳಿ ಕೇಳಿಕೊಂಡಿದ್ದರಂತೆ. ಆದರೆ, ಅದಕ್ಕಿಂತ ದೊಡ್ಡ ಚಾಲೆಂಜ್ ಎದುರಾಗಿದ್ದು ಸಲ್ಮಾನ್ ಖಾನ್ ಎದೆಗೆ ಒದೆಯುವ ಸೀನ್ ಬಂದಾಗ. ಹಿಟ್ ಮಿ ಬುಡ್ಡೀ.. ಎಂದು ಸಲ್ಮಾನ್ ಹೇಳಿದರೂ ಆ ಸೀನ್ ಮಾಡುವುದು ಕಷ್ಟವಾಯ್ತಂತೆ. ಕೆಲವು ಗಂಟೆಗಳ ಕಾಲ ಚಿತ್ರೀಕರಣವನ್ನೇ ನಿಲ್ಲಿಸಿ ನಂತರ ಶೂಟ್ ಮಾಡಿದರಂತೆ.ಅದೂ ಕೆಲವು ಬದಲಾವಣೆಗಳೊಂದಿಗೆ..
`ನನಗೆ ಆಗ ನನ್ನನ್ನು ಒದೆಯಲು ಅದೇಕೆ ನಮ್ಮ ಸಹನಟರು ಹಿಂದೇಟು ಹಾಕ್ತಾರೆ ಅನ್ನೋದು ಅರ್ಥವಾಯ್ತು' ಎಂದಿದ್ದಾರೆ ಕಿಚ್ಚ ಸುದೀಪ್. ಸದ್ಯಕ್ಕೆ ಸುದೀಪ್ ಪೈಲ್ವಾನ್ ಚಿತ್ರದ ಬಿಡುಗಡೆಯಲ್ಲಿ ಫುಲ್ ಬ್ಯುಸಿ. ಸೆಪ್ಟೆಂಬರ್ 12ರಂದು ಪೈಲ್ವಾನ್ ಜಗತ್ತಿನಾದ್ಯಂತ 3000ಕ್ಕೂ ಹೆಚ್ಚು ಥಿಯೇಟರುಗಳಲ್ಲಿ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.ನ