ಶ್ರೀಲೀಲಾ.. ಭರಾಟೆ ಮತ್ತು ಕಿಸ್ ಚಿತ್ರಗಳ ಹೀರೋಯಿನ್. ಎ.ಪಿ. ಅರ್ಜುನ್ ಕಣ್ಣಿಗೆ ಬಿದ್ದು ಆ್ಯಕ್ಟರ್ ಆದ ಚೆಲುವೆ. ಶ್ರೀಲೀಲಾ ಬರೀ ನಟಿಯಲ್ಲ, ಆಕೆ ಎಂಬಿಬಿಎಸ್ ಓದುತ್ತಿದ್ದಾರೆ. ಭರತನಾಟ್ಯ, ಕೂಚುಪುಡಿ, ಬೆಲ್ಲಿಡ್ಯಾನ್ಸ್ ಪ್ರವೀಣೆ. ವೀಣೆ, ಪಿಯಾನೋ ವಾದನದಲ್ಲಿ ಎತ್ತಿದ ಕೈ. ರಾಜ್ಯಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಹಾಕಿ ಮತ್ತು ಈಜುಪಟು. ಇಷ್ಟೆಲ್ಲ ಇದ್ದ ಶ್ರೀಲೀಲಾ ಅರ್ಜುನ್ ಕಣ್ಣಿಗೆ ಬಿದ್ದು ಕಿಸ್ ಚಿತ್ರಕ್ಕೆ ನಾಯಕಿಯಾದರು. ಅದಾದ ಮೇಲೆ ಚೇತನ್ ಕಣ್ಣಿಗೆ ಬಿದ್ದರು. ಶ್ರೀಮುರಳಿಯ ಭರಾಟೆಗೆ ಜೊತೆಯಾದರು. ಎರಡೂ ಚಿತ್ರಗಳು ಈಗ ಬಿಡುಗಡೆಯ ಹೊಸ್ತಿಲಲ್ಲಿವೆ.
ಆದರೆ ಶ್ರೀಲೀಲಾ ಇದೆಲ್ಲದರ ನಡುವೆ ಕಾಲೇಜು ಬಿಟ್ಟಿಲ್ಲ. ಎರಡು ಸಿನಿಮಾಗಳ ನಡುವೆಯೂ ಬಿಡುವು ಮಾಡಿಕೊಂಡು ಕಾಲೇಜಿಗೆ ಹೋಗುತ್ತಿದ್ದಾರೆ. ಡಾಕ್ಟರ್ ಆಗಬೇಕು ಎನ್ನುವುದು ನನ್ನ ಕನಸು. ಅದನ್ನು ಮಾಡಿಯೇ ತೀರುತ್ತೇನೆ ಎನ್ನುವ ಹಠ ಚೆಲುವೆಯ ಕಂಗಳಲ್ಲಿದೆ.