ಪವನ್ ಒಡೆಯರ್ ನಿರ್ದೇಶನದ ದಿ ವಿಲನ್ ನಿರ್ಮಾಪಕ ಸಿ.ಆರ್.ಮನೋಹರ್ ನಿರ್ಮಾಣದ ಸಿನಿಮಾ ರೆಮೋ. ಇಶಾನ್, ಅಶಿಕಾ ರಂಗನಾಥ್ ಜೋಡಿಯಾಗಿರುವ ಚಿತ್ರಕ್ಕೆ ಅದ್ದೂರಿ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರಕ್ಕಾಗಿಯೇ ಬೆಂಗಳೂರಿನಲ್ಲಿ 1 ಕೋಟಿ ವೆಚ್ಚದ ಸೆಟ್ ಹಾಕಿದ್ದಾರೆ ಪವನ್ ಒಡೆಯರ್.
ವಿಜಯನಗರ ಬಸ್ ನಿಲ್ದಾಣ, ಮೆಟ್ರೋ ಆಸುಪಾಸಿನಲ್ಲೇ ಇರುವ ಕಟ್ಟಡದ ಮೇಲೆ ಸಂಪೂರ್ಣ ಗಾಜಿನಲ್ಲಿ ಸೆಟ್ ಹಾಕಲಾಗಿದೆ. ಗುಣ ಮತ್ತು ಕರಣ್ ಸೆಟ್ ಡಿಸೈನ್ ಮಾಡಿದ್ದಾರೆ.
ಗೂಗ್ಲಿ ನಂತರ ಪವನ್ ಒಡೆಯರ್ ಮತ್ತೊಮ್ಮೆ ಲವ್ ಸಬ್ಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿದೆ.