ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂಡರ್ ವಾಟರ್ ಸಾಹಸ ಮಾಡಿದ್ದಾರೆ. ಅದು ರಾಬರ್ಟ್ ಚಿತ್ರಕ್ಕಾಗಿ. ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರದಲ್ಲಿ ಸುಮಾರು 4 ನಿಮಿಷದ ಅಂಡರ್ ವಾಟರ್ ಸೀನ್ ಇದೆಯಂತೆ. ಆ ಸೀನ್‍ನ್ನು ಹಲಸೂರು ಬಳಿಯ ಸ್ವಿಮ್ಮಿಂಗ್‍ಪೂಲ್‍ನಲ್ಲಿ ಚಿತ್ರೀಕರಿಸಲಾಗಿದೆ. ಮುಂಬೈನಿಂದ ಬಂದಿದ್ದ ಎಕ್ಸ್‍ಪರ್ಟ್‍ಗಳ ತಂಡ ಶೂಟಿಂಗ್ ಮುಗಿಸಿಕೊಟ್ಟಿದೆ.
ನಟ, ನಿರ್ದೇಶಕ ಮಾಸ್ಟರ್ ಕಿಶನ್ (ಈಗ ದೊಡ್ಡವರಾಗಿದ್ದಾರೆ) ಈ ದೃಶ್ಯದ ಚಿತ್ರೀಕರಣಕ್ಕೆ ಸಹಾಯ ಮಾಡಿದ್ದಾರಂತೆ. ಟೀನೇಜ್ ಚಿತ್ರದಲ್ಲಿ ಅಂಡರ್‍ವಾಟರ್ ಸಾಹಸ ಮಾಡಿದ್ದ ಕಿಶನ್‍ಗೆ ಸ್ಕೂಬಾ ಡೈವಿಂಗ್ ಕೂಡಾ ಬರುತ್ತೆ. ಹೀಗಾಗಿ ಸಹಾಯವಾಯ್ತು ಎಂದಿರುವ ಕಿಶನ್, ದರ್ಶನ್ ಅವರ ಕೋಆಪರೇಟಿವ್ ಗುಣಕ್ಕೆ ಮಾರು ಹೋಗಿದ್ದಾರೆ. ಸರಿಯಾಗಿ ಬರದೇ ಇದ್ದರೆ ಮತ್ತೆ ಶೂಟ್ ಮಾಡೋಣ ಎನ್ನತ್ತಿದ್ದ ದರ್ಶನ್, ನನಗಂತೂ ತುಂಬಾ ಪ್ರೋತ್ಸಾಹ ನೀಡಿದರು. ಅವರ ಜೊತೆ ಕೆಲಸ ಮಾಡಿದ್ದು ಖುಷಿ ತಂದಿದೆ ಎಂದಿದ್ದಾರೆ ಕಿಶನ್.
ಅಂಡರ್ ವಾಟರ್ ಶೂಟಿಂಗ್ ಒಂದು ವಿಭಿನ್ನ ಅನುಭವ. ಚಿತ್ರದಲ್ಲಿ ಈ ದೃಶ್ಯಕ್ಕೆ ತುಂಬಾ ಪ್ರಾಮುಖ್ಯತೆ ಇದೆ ಎಂದಿದ್ದಾರೆ ತರುಣ್. ಚಿತ್ರಕ್ಕೆ ಪಂಜಾಬಿ ಮೂಲದ ಹುಡುಗಿ ಮೆಹ್ರೀನ್ ನಾಯಕಿ ಎನ್ನಲಾಗಿದ್ದು, ಜಗಪತಿ ಬಾಬು ವಿಲನ್ ಆಗಿ ನಟಿಸುತ್ತಿದ್ದಾರೆ.