ದಯಾಳ್ ಪದ್ಮನಾಭನ್ ಇತ್ತೀಚೆಗೆ ತಾನೇ ರಂಗನಾಯಕಿ ಚಿತ್ರವನ್ನು ಕಂಪ್ಲೀಟ್ ಮಾಡಿದ್ದಾರೆ. ಆದಿತಿ ಪ್ರಭುದೇವ ಜೊತೆಗಿನ ರಂಗನಾಯಕಿ ಮುಗಿಸಿದ್ದೇ ತಡ.. ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು ಒಂಭತ್ತನೇ ದಿಕ್ಕು.
ಲೂಸ್ ಮಾದ ಯೋಗಿ ನಾಯಕರಾಗಿದ್ದು, ಆದಿತಿ ಪ್ರಭುದೇವ ನಾಯಕಿ. ಇದೊಂದು ಸಾಹಸ ಪ್ರಧಾನ ಕ್ರೈಂ ಥ್ರಿಲ್ಲರ್ ಸಿನಿಮಾ ಆಗಿದ್ದು, ಹಲವು ಸಾಹಸ ಸನ್ನಿವೇಶಗಳೂ ಇವೆ ಎಂದಿದ್ದಾರೆ ದಯಾಳ್ ಪದ್ಮನಾಭನ್. ಸೆಪ್ಟೆಂಬರ್ 12ರಂದು ಒಂಭತ್ತನೇ ದಿಕ್ಕು ಶೂಟಿಂಗ್ ಶುರುವಾಗಲಿದೆ.