` `ಪರಿಮಳಾ ಲಾಡ್ಜ್'ಗೆ ಸಿದ್ಲಿಂಗು ಜೋಡಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
siddlingu jodi teams up for parimala guest house
Loose Mada Yogi, Suman Ranganath

ಸಿದ್ಲಿಂಗು, 2012ರಲ್ಲಿ ತೆರೆ ಕಂಡಿದ್ದ ಸೂಪರ್ ಹಿಟ್ ಸಿನಿಮಾ. ನಿರ್ದೇಶಕ ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಯೋಗಿ, ರಮ್ಯಾ ಹಾಗೂ ಸುಮನ್ ರಂಗನಾಥ್ ನಟಿಸಿದ್ದರು. ಈಗ ಆ ಜೋಡಿ ಮತ್ತೆ ಜೊತೆಯಾಗಿದೆ. ರಮ್ಯಾ ಅವರನ್ನು ಬಿಟ್ಟು, ಯೋಗಿ ಮತ್ತು ಸುಮನ್ ಮತ್ತೆ ಒಂದಾಗಿದ್ದಾರೆ. ಅವರ ಜೊತೆಗೆ ನೀನಾಸಂ ಸತೀಶ್ ಕೂಡಾ ಇದ್ದಾರೆ. ನೀರ್‍ದೋಸೆ, ಬ್ಯೂಟಿಫುಲ್ ಮನಸುಗಳು ಖ್ಯಾತಿಯ ನಿರ್ಮಾಪಕ ಪ್ರಸನ್ನ, ನಿರ್ಮಾಣ ಮಾಡುತ್ತಿರುವ ಚಿತ್ರ ಇದು. ಟೈಟಲ್ ಪರಿಮಳಾ ಲಾಡ್ಜ್.

ಯೋಗಿ ಮತ್ತು ಸುಮನ್ ರಂಗನಾಥ್, ಸಿದ್ಲಿಂಗು ನಂತರ ಮತ್ತೆ ಒಂದಾಗಿದ್ದಾರೆ. ವಿಜಯ್ ಪ್ರಸಾದ್ ಜೊತೆ ಸುಮನ್‍ಗೆ ಇದು 4ನೇ ಸಿನಿಮಾ. ಸಿದ್ಲಿಂಗು, ನೀರ್‍ದೋಸೆ, ತೋತಾಪುರಿ ಚಿತ್ರಗಳಲ್ಲಿ ಸುಮನ್ ಇದ್ದಾರೆ. ನೀನಾಸಂ ಸತೀಶ್ ಅವರಿಗೆ ಇದು ವಿಜಯ್ ಪ್ರಸಾದ್ ಜೊತೆ ಮೊದಲ ಸಿನಿಮಾ. ಹೀಗಾಗಿಯೇ ಚಿತ್ರ ಬಹಳ ನಿರೀಕ್ಷೆ ಹುಟ್ಟಿಸಿದೆ.