ಬೆಲ್‍ಬಾಟಂ ನಂತರ ರಿಷಬ್ ಶೆಟ್ಟಿ ನಾಯಕರಾಗಿ ನಟಿಸಲಿರುವ ಹೊಸ ಚಿತ್ರದ ಟೈಟಲ್ ಹೊರಬಿದ್ದಿದೆ. ಮಹನೀಯರೇ.. ಮಹಿಳೆಯರೇ.. ಇದು ಚಿತ್ರದ ಟೈಟಲ್. ದಯವಿಟ್ಟು ಗಮನಿಸಿ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ರೋಹಿತ್ ಪದಕಿ ಈ ಚಿತ್ರಕ್ಕೆ ನಿರ್ದೇಶಕ. ಇಲ್ಲಿಯೂ ಅವರು ಸಾರ್ವಜನಿಕ ಪ್ರಕಟಣೆಯನ್ನೇ ತಮ್ಮ ಚಿತ್ರದ ಟೈಟಲ್ ಮಾಡಿರುವುದು ವಿಶೇಷ.
ಬೆಲ್‍ಬಾಟಂ ನಿರ್ಮಾಪಕ ಕೃಷ್ಣ ಸಾರ್ಥಕ್ ಅವರೇ ಈ ಚಿತ್ರಕ್ಕೂ ನಿರ್ಮಾಪಕರಾಗಿದ್ದಾರೆ. ಇದು ಕೂಡಾ ಕಾಮಿಡಿ ಟ್ರ್ಯಾಕ್ ಸಿನಿಮಾ ಆಗಿದೆ. ರಿಷಬ್ ಶೆಟ್ಟಿಯವರ ಕಥಾ ಸಂಗಮ ಚಿತ್ರೀಕರಣ ಮುಗಿಸಿದೆ. ಆ್ಯಂಟಿಗೋನಿ ಶೆಟ್ಟಿ, ನಾಥೂರಾಮ್ ಚಿತ್ರದ ಕೆಲಸಗಳು ಪ್ರಗತಿಯಲ್ಲಿವೆ. ಇನ್ನು ಸ್ವತಃ ರಿಷಬ್ ಶೆಟ್ಟಿ ನಿರ್ದೇಶಿಸಬೇಕಿರುವ ರುದ್ರಪ್ರಯಾಗ ಚಿತ್ರದ ಪ್ರಿಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ. ಇದರ ನಡುವೆಯೇ ಮಹನೀಯರೇ.. ಮಹಿಳೆಯರೇ.. ಎನ್ನಲು ರಿಷಬ್ ರೆಡಿಯಾಗಿದ್ದಾರೆ.