Print 
darshan, horse riding,

User Rating: 5 / 5

Star activeStar activeStar activeStar activeStar active
 
darshan's horse riding
Darshan

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮದಕರಿ ಚಿತ್ರಕ್ಕಾಗಿ ತಯಾರಿ ಶುರು ಮಾಡಿದ್ದಾರಾ..? ಅಂಥದ್ದೊಂದು ಕುತೂಹಲ ಹುಟ್ಟಿಸಿರುವುದು ದರ್ಶನ್ ಮಾಡಿರುವ ಈ ಕುದುರೆ ಸವಾರಿ. ತಮ್ಮ ಫಾರ್ಮ್‍ಹೌಸ್‍ನಲ್ಲಿರುವ ಗಜೇಂದ್ರ ಎಂಬ ಕುದುರೆಯ ಮೇಲೆ ದರ್ಶನ್ ಸವಾರಿ ಮಾಡಿದ್ದಾರೆ. ಈ ಗಜೇಂದ್ರ ಕುದುರೆಯನ್ನು ದರ್ಸನ್ ತಂದಿರೋದು ಮಹಾರಾಷ್ಟ್ರದಿಂದ.

ಸದ್ಯಕ್ಕೆ ಕುರುಕ್ಷೇತ್ರದ ಯಶಸ್ಸಿನ ಝೂಂನಲ್ಲಿರೋ ದರ್ಶನ್, ಒಡೆಯ, ರಾಬರ್ಟ್ ಚಿತ್ರಗಳ ಶೂಟಿಂಗ್‍ನಲ್ಲೂ ಬ್ಯುಸಿ. ಅವರೆಡೂ ಮುಗಿಯುತ್ತಿದ್ದಂತೆ ಗಂಡುಗಲಿ ಮದಕರಿ ಸಿನಿಮಾ ಶುರುವಾಗಬೇಕು.

ಸಂಕ್ರಾಂತಿಗೆ ಮುಹೂರ್ತ ನಡೆಸಿ ಓಂಕಾರ ಹೇಳಲು ರಾಕ್‍ಲೈನ್ ವೆಂಕಟೇಶ್ ಪ್ಲಾನ್ ಮಾಡುತ್ತಿದ್ದಾರೆ. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ದರ್ಶನ್, ಮದಕರಿ ನಾಯಕನಾಗುತ್ತಿದ್ದಾರೆ.