` ಮದಗಜನಿಗೆ ಮಹಾನಟಿ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
keerthy suresh to act in madaga ?
Keerthy Suresh, Sri Murali

ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್, ರೋರಿಂಗ್ ಸ್ಟಾರ್ ಶ್ರೀಮುರಳಿಗಾಗಿ ಮದಗಜ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ನಾಯಕಿಯಾಗಿ ಕೀರ್ತಿ ಸುರೇಶ್ ಅವರನ್ನು ಸಂಪರ್ಕಿಸಿದ್ದಾರೆ ಮಹೇಶ್. ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಭೇಟಿಯಾದ ಕೀರ್ತಿ ಸುರೇಶ್ ಅವರ ಬಳಿ ಮಹೇಶ್ `ನಿಮ್ಮ ಜೊತೆ ಸಿನಿಮಾ ಮಾಡುವ ಆಸೆಯಿದೆ' ಎಂದು ಹೇಳಿದ್ದಾರೆ. ಇದಕ್ಕೆ ಕೀರ್ತಿ ಸುರೇಶ್ ಪಾಸಿಟಿವ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಕಥೆಯನ್ನು ಮೇಲ್ ಮಾಡಿ, ತಮ್ಮ ತಾಯಿಯ ಜೊತೆ ಮಾತನಾಡುವಂತೆ ಹೇಳಿದ್ದಾರಂತೆ ಕೀರ್ತಿ ಸುರೇಶ್. ನನಗೆ ಭಾಷೆಯ ಗಡಿ ಇಲ್ಲ. ಕಥೆ ಮತ್ತು ನನ್ನ ಪಾತ್ರ ಚೆನ್ನಾಗಿರಬೇಕು ಅಷ್ಟೆ ಎಂದಿದಾರಂತೆ ಕೀರ್ತಿ ಸುರೇಶ್. ಇದನ್ನೆಲ್ಲ ಖುಷಿಯಿಂದ ಹೇಳಿಕೊಂಡಿದ್ದಾರೆ ಮಹೇಶ್.

ಅಂದಹಾಗೆ ಕೀರ್ತಿ ಸುರೇಶ್ ಅವರ ತಾಯಿ ಮೇನಕಾ ಸುರೇಶ್ ಕನ್ನಡದಲ್ಲಿ ಸಮಯದ ಗೊಂಬೆ ಚಿತ್ರದಲ್ಲಿ ನಟಿಸಿದ್ದರು. ಹೆಬ್ಬುಲಿ ಉಮಾಪತಿ ನಿರ್ಮಾಣದ ಚಿತ್ರದ ಮೂಲಕ ರಾಷ್ಟ್ರಪ್ರಶಸ್ತಿ ಪುರಸ್ಕøತಿ ಮಹಾನಟಿ ಕೀರ್ತಿ ಸುರೇಶ್ ಕನ್ನಡಕ್ಕೆ ಬರುತ್ತಾರಾ..? ನಿರೀಕ್ಷೆಯಂತೂ ಜೋರಾಗಿದೆ. 

Shivarjun Movie Gallery

Actor Bullet Prakash Movie Gallery