` ಸುಲ್ತಾನ್ ಮತ್ತು ಪೈಲ್ವಾನ್ ಜಂಘೀಕುಸ್ತಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
pailwan meets sultan
Sudeep, Salman Khan

ಪೈಲ್ವಾನ್ ಚಿತ್ರದೊಂದಿಗೆ ದೇಶಾದ್ಯಂತ ಸದ್ದು ಮಾಡ್ತಿದ್ದಾರೆ ಕಿಚ್ಚ ಸುದೀಪ್. ಇನ್ನು ಬಾಲಿವುಡ್ ಸುಲ್ತಾನ್, ಸಲ್ಮಾನ್ ಖಾನ್ ಕೂಡಾ ಪೈಲ್ವಾನನಾಗಿ ಅಬ್ಬರಿಸಿದ್ದವರು. ಅವರಿಬ್ಬರೂ ಈಗ ಕುಸ್ತಿಗೆ ಬಿದ್ದಿದ್ದಾರೆ. ಈ ಫೋಟೋ ಹೊರಬಿಟ್ಟಿರೋದು ಕಿಚ್ಚ ಸುದೀಪ್.

`ಇದು ಮತ್ತೊಂದು ಪೋಸ್ಟರ್ ಅಲ್ಲ. ಸಲ್ಮಾನ್ ಖಾನ್ ತಮ್ಮ ಪ್ರೀತಿಪಾತ್ರರ ಜೊತೆ ಇರುವುದೇ ಹೀಗೆ. ನಿಮ್ಮ ಬದುಕಿನಲ್ಲಿ ನನಗೆ ಈ ಸ್ಥಾನ ನೀಡಿದ್ದಕ್ಕೆ ಧನ್ಯವಾದಗಳು ಸರ್' ಎಂದು ಬರೆದುಕೊಂಡಿದ್ದಾರೆ ಸುದೀಪ್.

ಕಿಚ್ಚ ಸುದೀಪ್, ಪೈಲ್ವಾನ್ ಕೃಷ್ಣ ಕಾಂಬಿನೇಷನ್ನಿನ ಪೈಲ್ವಾನ್ ಚಿತ್ರಕ್ಕೆ ಸಲ್ಮಾನ್ ಖಾನ್ ಶುಭ ಕೋರಿದ್ದಾರೆ. ಸಲ್ಮಾನ್ ಖಾನ್‍ಗೂ  ಪೈಲ್ವಾನ್ ಟ್ರೇಲರ್ ಬಹಳ ಇಷ್ಟವಾಗಿದೆ. ಪೈಲ್ವಾನ್ ಸೆಪ್ಟೆಂಬರ್ 12ರಂದು ರಿಲೀಸ್ ಆಗುತ್ತಿದೆ.