ಕನ್ನಡದ ಸೂಪರ್ ಹಿಟ್ ಸಿನಿಮಾ ಆಗಿರುವ ಮುನಿರತ್ನ ಕುರುಕ್ಷೇತ್ರ ದಾಖಲೆ ಬರೆಯಲು ಹೊರಟಿದೆ. ಬಿಡುಗಡೆಯಾದ 14 ದಿನಕ್ಕೆ ಕುರುಕ್ಷೇತ್ರ 97 ಕೋಟಿ ಕಲೆಕ್ಷನ್ ಮಾಡಿದೆ. ಇನ್ನು ಕೆಲವೇ ದಿನಗಳಲ್ಲಿ 100 ಕೋಟಿ ಕ್ಲಬ್ ಸೇರುತ್ತಿದೆ ಕುರುಕ್ಷೇತ್ರ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ. ಅಂಬರೀಷ್, ರವಿಚಂದ್ರನ್, ಅರ್ಜುನ್ ಸರ್ಜಾ, ಮೇಘನಾ ರಾಜ್, ಹರಿಪ್ರಿಯಾ, ರವಿಶಂಕರ್ ಸೇರಿದಂತೆ ಕನ್ನಡ ಚಿತ್ರರಂಗದ ದಿಗ್ಗಜರೆಲ್ಲ ಒಂದೇ ಕಡೆ ಸೇರಿರುವ ಚಿತ್ರ, ಕನ್ನಡದಲ್ಲಿ 2ನೇ 100 ಕೋಟಿ ಕ್ಲಬ್ ಸೇರುವ ಚಿತ್ರವಾಗಲಿದೆ.