ಕನ್ನಡದ ಬಾಕ್ಸಾಫೀಸ್ನಲ್ಲಿ ದಾಖಲೆಗಳನ್ನೇ ಸೃಷ್ಟಿಸಿದ ಕುರುಕ್ಷೇತ್ರ, ಈಗ ಮಲಯಾಳನಲ್ಲೂ ರಿಲೀಸ್ ಆಗ್ತಿದೆ.ಇದೇ ವಾರ ಅಂದರೆ ಆಗಸ್ಟ್ 23ಕ್ಕೆ ಕುರುಕ್ಷೇತ್ರದ ಮಲಯಾಳಂ ವರ್ಷನ್ ತೆರೆ ಕಾಣುತ್ತಿದೆ. ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆದ ಸಿನಿಮಾ ಕುರುಕ್ಷೇತ್ರ. ವರಮಹಾಲಕ್ಷ್ಮಿ ಹಬ್ಬದಂದು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಆಗಿತ್ತು. ಸ್ವಾತಂತ್ರ್ಯ ದಿನಾಚರಣೆ ದಿನ ತಮಿಳು ಭಾಷೆಯಲ್ಲಿ ತೆರೆ ಕಂಡಿತ್ತು.
ಈಗ ಆಗಸ್ಟ್ 23ರಂದು ಮಲಯಾಳಂನಲ್ಲಿ ರಿಲೀಸ್ ಆಗುತ್ತಿರುವ ಕುರುಕ್ಷೇತ್ರಕ್ಕೆ ಈ ವಾರ ಯಾವುದೇ ದೊಡ್ಡ ಸ್ಟಾರ್ ಚಿತ್ರ ಎದುರಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ, ಅಂಬರೀಷ್ ಅಭಿನಯದ ಕೊನೆಯ ಸಿನಿಮಾ ಆಗಿರುವ ಮುನಿರತ್ನ ಕುರುಕ್ಷೇತ್ರ, ಕನ್ನಡದಲ್ಲಿ ಜನಮೆಚ್ಚುಗೆ ಗಳಿಸಿದೆ. ಹಿಂದಿಯಲ್ಲಿ ಸಿನಿಮಾ ಇನ್ನೂ ರಿಲೀಸ್ ಆಗಬೇಕಿದೆ. ರಾಕ್ಲೈನ್ ವೆಂಕಟೇಶ್, ಎಲ್ಲ ಭಾಷೆಯಲ್ಲೂ ಸಿನಿಮಾ ವಿತರಣೆ ಮಾಡುತ್ತಿದ್ದಾರೆ.