` ತುಂಟ ತುಟಿಗಳ ಆಟೋಗ್ರಾಫ್.. ಌಕ್ಷನ್ ಪ್ರಿನ್ಸ್ ವಾಯ್ಸ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dhruva sarja lends his voice to ap arjun's kiss movie
Dhruva Sarja, AP Arjun

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೀರೋ ಆಗಿದ್ದು ಅದ್ದೂರಿ ಸಿನಿಮಾದಿಂದ. ಆ ಚಿತ್ರದ ನಿರ್ದೇಶಕ ಎ.ಪಿ ಅರ್ಜುನ್. ಅದಾದ ಮೇಲೆ ಹ್ಯಾಟ್ರಿಕ್ ಹಿಟ್ ಕೊಟ್ಟಿರುವ ಧ್ರುವ ಸರ್ಜಾ, ಈಗ ಪೊಗರು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ತಮ್ಮ ಮೊದಲ ಚಿತ್ರದ ನಿರ್ದೇಶಕರ ಹೊಸ ಚಿತ್ರಕ್ಕೆ ಸಪೋರ್ಟ್ ಕೊಟ್ಟಿದ್ದಾರೆ.

ವಿರಾಟ್ ಮತ್ತು ಶ್ರೀಲೀಲಾ ಜೊತೆಯಾಗಿ ನಟಿಸಿರುವ ಕಿಸ್ ಸಿನಿಮಾಗೆ ಎ.ಪಿ.ಅರ್ಜುನ್ ನಿರ್ದೇಶಕ ಹಾಗು ನಿರ್ಮಾಪಕ. ಆ ಚಿತ್ರಕ್ಕೆ ತಮ್ಮ ಪವರ್ ಫುಲ್  ವಾಯ್ಸ್ ಕೊಟ್ಟಿದ್ದಾರೆ ಧ್ರುವ.  ಅಲ್ಲಿಗೆ ಕಿಸ್ ಚಿತ್ರಕ್ಕೆ ಇನ್ನೊಂದು ಪವರ್ ಸಿಕ್ಕಂತಾಗಿದೆ. 

ಈ ಮೊದಲು ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್, ಬೆಟ್ಟೇಗೌಡ ವರ್ಸಸ್‌ ಚಿಕ್ಕಬೋರಮ್ಮ ಅನ್ನೋ ಹಾಡು ಹಾಡಿದ್ದರು. ಈಗ ಌಕ್ಷನ್ ಪ್ರಿನ್ಸ್ ಧ್ರುವಾ ಧ್ವನಿಯ ಪವರ್ ಸಿಕ್ಕಿದೆ. ಅಂದಹಾಗೆ ಕಿಸ್ ಚಿತ್ರಕ್ಕೆ 

ತುಂಟ ತುಟಿಗಳ ಆಟೋಗ್ರಾಫ್ ಅನ್ನೋ ಟ್ಯಾಗ್ಲೈನ್ ಇದೆ.