ಅಯೋಗ್ಯ ಚಿತ್ರದ ಮೂಲಕ ಭರ್ಜರಿ ಸೌಂಡು ಮಾಡಿದ ನಿರ್ದೇಶಕ ಮಹೇಶ್ ಕುಮಾರ್. ಸದ್ಯಕ್ಕೆ ಶ್ರೀಮುರಳಿಯ ಮದಗಜ ಚಿತ್ರಕ್ಕೆ ತಯಾರಾಗುತ್ತಿದ್ದಾರೆ. ಇದೆಲ್ಲದರ ಜೊತೆಗೆ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಅತ್ಯುತ್ತಮ ನವ ನಿರ್ದೇಶಕ ಪ್ರಶಸ್ತಿ ಪಡೆದಿರುವ ಮಹೇಶ್ ಕುಮಾರ್ಗೆ ಬಂಪರ್ ಆಫರ್ ಸಿಕ್ಕಿದೆ.
ಸೈಮಾ ಸಂಸ್ಥಾಪಕ ವಿಷ್ಣು ಇಂಧೂರಿಯವರೇ ಮಹೇಶ್ಗೆ ಹೊಸದೊಂದು ಸಿನಿಮಾ ಆಫರ್ ಕೊಟ್ಟಿದ್ದಾರೆ. ಅದೂ ಸೋನಿ ಪಿಕ್ಚರ್ಸ್ ಸಹಯೋಗದಲ್ಲಿ. ಅಫ್ಕೋರ್ಸ್.. ಅದು ಕನ್ನಡ ಸಿನಿಮಾನೇ.. ಸದ್ಯಕ್ಕೆ ಮೊದಲ ಹಂತದ ಮಾತುಕತೆ ಆಗಿದೆ. ಅಧಿಕೃತ ಘೋಷಣೆ ಬಾಕಿ ಇದೆ.
ಆಫರ್ ಸಿಕ್ಕಿರುವುದು ಖುಷಿ ಕೊಟ್ಟಿದೆ. ಮಾತುಕತೆ ಇನ್ನೂ ಫೈನಲ್ ಆಗಿಲ್ಲ. ಅಧಿಕೃತ ಘೋಷಣೆ ಆದ ಮೇಲೆ ಮಾತನಾಡುತ್ತೇನೆ ಎಂದಿದ್ದಾರೆ ಮಹೇಶ್ ಕುಮಾರ್