` ಕನ್ನಡಿಗರ ಯಜಮಾನ.. ನಿಮಗಿದೋ ರಂಗನಮನ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
tribute to dr vishnuvardhan with dramas
Vishnu Natakotsava

ಸಾಹಸಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಹುಟ್ಟುಹಬ್ಬ ಇರುವುದು ಸೆಪ್ಟೆಂಬರ್ 18ಕ್ಕೆ. ಎಂದಿನಂತೆ ವಿಷ್ಣು ಸೇನಾ ಸಮಿತಿ ತಿಂಗಳಿಗೂ ಮೊದಲೇ ಯಜಮಾನನ ಉತ್ಸವಕ್ಕೆ ಚಾಲನೆ ಕೊಟ್ಟಿದೆ. 3 ವರ್ಷಗಳ ಹಿಂದೆ ದೆಹಲಿಯಲ್ಲಿ ಕಲರ್‍ಫುಲ್ ಕಾರ್ಯಕ್ರಮ ಮಾಡಿದ್ದ ವಿಎಸ್‍ಎಸ್, ಈ ಬಾರಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗಭೂಮಿ ಮೂಲಕ ನಮನ ಸಲ್ಲಿಸಲು ಮುಂದಾಗಿದೆ.

ಸೆಪ್ಟೆಂಬರ್ 18,19 ಮತ್ತು 20ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕೋತ್ಸವ ನಡೆಯಲಿದೆ. ಕನ್ನಡಿಗರ ಯಜಮಾನ.. ನಿಮಗಿದೋ ರಂಗನಮನ ಎನ್ನುವುದೇ ಉತ್ಸವದ ಘೋಷವಾಕ್ಯ.

ಚೋರ ಚರಣದಾಸ, ಊರು ಸುಟ್ರೂ ಹನುಮಪ್ಪ ಹರಗೆ, ಶರೀಫ, ವೇಷ, ಗುಲಾಬಿ ಗ್ಯಾಂಗು ನಾಟಕಗಳು ಆಯ್ಕೆಯಾಗಿವೆ. ರಾಜಗುರು ಹೊಸಕೋಟೆ ಉತ್ಸವದ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಈ ಕುರಿತು ಮಾಹಿತಿ ನೀಡಿದ್ದು `ವಿಷ್ಣುವರ್ಧನ್ ಅವರ ಹುಟ್ಟುಹಬ್ಬಕ್ಕಾಗಿ ್ನ ನಾಟಕ, ಗೀತ ಗಾಯನ, ಛಾಯಾಚಿತ್ರ ಪ್ರದರ್ಶನ, ಪುಸ್ತಕ ಬಿಡುಗಡೆ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದಿದ್ದಾರೆ. ಕಿಚ್ಚ ಸುದೀಪ್ ಕೂಡಾ ವಿಷ್ಣು ನಾಟಕೋತ್ಸವಕ್ಕೆ ಶುಭ ಕೋರಿದ್ದಾರೆ.

India Vs England Pressmeet Gallery

Odeya Audio Launch Gallery