ಇದೇ ವಾರ ತೆರೆ ಕಾಣುತ್ತಿರುವ ನನ್ನ ಪ್ರಕಾರ ಚಿತ್ರದಲ್ಲಿ ಮಯೂರಿ ಅವರದ್ದು ವಿಸ್ಮಯ ಅನ್ನೋ ಹೆಸರಿನ ಪಾತ್ರ. ಸಿಗರೇಟು ಸೇದುವ, ಹುಕ್ಕಾ ಹೊಡೆಯುವ ಇನ್ನೋಸೆಂಟ್ ಗರ್ಲ್. ಪಾತ್ರವೇ ಒಂದು ವಿಸ್ಮಯ. `ನಾನು ರಿಯಲ್ ಲೈಫ್ನಲ್ಲಿ ಏನಲ್ಲವೋ.. ಅದನ್ನು ಈ ಪಾತ್ರದಲ್ಲಿ ಮಾಡಿದ್ದೇನೆ' ಎನ್ನುವ ಮಯೂರಿ, ನನ್ನ ಪ್ರಕಾರ ರಿಲೀಸ್ ಆದ ನಂತರ ಇನ್ನೊಂದು ಎಕ್ಸೈಟ್ಮೆಮಟ್ಗೆ ಕಾಯುತ್ತಿದ್ದಾರೆ.
ಸಿನಿಮಾ ಪ್ರಮೋಷನ್ ಮುಗಿಸಿಕೊಂಡು ಜರ್ಮನಿಗೆ ಹೋಗಬೇಕಿದೆ. ಅಲ್ಲಿ ನನ್ನ ಅಕ್ಕ ತಾಯಿಯಾಗುತ್ತಿದ್ದಾರೆ. ಅವಳಿ ಜವಳಿ ಮಕ್ಕಳ ಹೆರಿಗೆ. ಅಮ್ಮನೂ ಹೋಗಿದ್ದಾರೆ. ಆ ಖುಷಿಯಲ್ಲಿ ನಾನಿರಬೇಕು. ನಾನು ಆಂಟಿಯಾಗುತ್ತಿದ್ದೇನೆ. ಎಕ್ಸೈಟ್ಮೆಂಟ್ನಲ್ಲಿದ್ದೇನೆ ಎನ್ನುವ ಮಯೂರಿ, ಜರ್ಮನಿಗೆ ಟಿಕೆಟ್ ಬುಕ್ ಮಾಡಿಸಿ ಆಗಿದೆ.
ಇತ್ತ ಇದೇ ವಾರ ಪ್ರಿಯಾಮಣಿ, ಕಿಶೋರ್ ಪ್ರಧಾನ ಪಾತ್ರದಲಿರುವ ಮಯೂರಿ ಕೇಂದ್ರ ಬಿಂದುವಾಗಿರುವ ನನ್ನ ಪ್ರಕಾರ ರಿಲೀಸ್ ಆಗುತ್ತಿದೆ. ಟ್ರೇಲರ್ ಮೂಲಕವೇ ಗಮನ ಸೆಳೆದಿರುವ ನನ್ನ ಪ್ರಕಾರ ಹಾಲಿವುಡ್ ಸ್ಟೈಲ್ನಲ್ಲಿದೆ.